Thursday, September 24, 2026
spot_imgspot_img
spot_imgspot_img

ಹಾಸನ : ಬೈಕ್‌ ಸ್ಕಿಡ್ ಆಗಿ ಹೇಮಾವತಿ ನಾಲೆಗೆ ಬಿದ್ದು ಯುವಕ ಸಾವು

- Advertisement -
- Advertisement -

ಹಾಸನ: ಬೈಕ್‌ನಲ್ಲಿ ಬರುವಾಗ ಸ್ಕಿಡ್ ಆಗಿ ಹೇಮಾವತಿ ನಾಲೆಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಹೇಮಂತ್ (ಆಟೋ ಕುಮಾರ 24) ಮೃತ ಯುವಕ. ಕೆಇಬಿ ನೌಕರನಾಗಿರುವ ಹೇಮಂತ್‌ ನಿನ್ನೆ ಸಂಜೆ ಕಚೇರಿ ಪಕ್ಕದಲ್ಲೇ ಹಾದು ಹೋಗಿರುವ ಹೇಮಾವತಿ ನಾಲೆ ಸಮೀಪ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಬೈಕ್‌ ಸ್ಕಿಡ್‌ ಆಗಿ ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೇಮಂತ್ ಶವಕ್ಕಾಗಿ ಇಂದು ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ಕೈಗೊಳ್ಳಲಿದ್ದಾರೆ.

- Advertisement -

Related news

error: Content is protected !!