- Advertisement -
- Advertisement -


ವಿಟ್ಲ ಶ್ರೀ ಯೋಗೀಶ್ವರ ಜೋಗಿಮಠ ಪುನರ್ ನಿರ್ಮಾಣದ ಪ್ರಗತಿಯಲ್ಲಿ ಇಂದು ಹುಣ್ಣಿಮೆಯ ಶುಭ ದಿನದಂದು ಬೆಳಿಗ್ಗೆ ದೇಗುಲದ ಸುತ್ತುಪೌಳಿಯ ಭಿತ್ತಿಯ ಕಾಮಗಾರಿಗೆ ಮುಹೂರ್ತ ಜರಗಿತು.



ಜೋಗಿಮಠದ ಮಠಾಧೀಶರು ಶ್ರೀ ಗುರುಗಳಾದ ಶ್ರೀ ಶ್ರೀ ಶ್ರದ್ದಾನಾಥ ಜಿ ಅವರು ನಮ್ಮ ಆರಾಧ್ಯ ದೇವರಾದ ಶ್ರೀ ಕಾಶಿ ಕಾಳ ಭೈರವ ಶ್ರೀ ಮಂಜುನಾಥ ಶ್ರೀ ವ್ಯಾಘ್ರ ಚಾಮುಂಡಿಗೆ ಪೂಜೆ ಸಲ್ಲಿಸಿದರು. ವಾಸ್ತುಶಿಲ್ಪಿ ಶ್ರೀ ಜಗನ್ನಿವಾಸ ರಾವ್ ಅವರು ಸಮಿತಿಯ ಪರವಾಗಿ ಪ್ರಾರ್ಥನೆ ಸಲ್ಲಿಸಿದರು.
ಸುತ್ತುಪೌಳಿ ಯ ನೈರುತ್ಯ ದಿಕ್ಕಿನಲ್ಲಿ ಬಿತ್ತಿ ರಚನೆಗೆ ಪೂಜ್ಯ ಗುರುಗಳು ಸಿಮೆಂಟ್ ಗಾರೆ ಹಾಕಿ ಕೆಂಪು ಕಲ್ಲು ಜೋಡಿಸಿ ಚಾಲನೆ ನೀಡಿದರು. ವಾಸ್ತುಶಿಲ್ಪಿ ಅವರ ಮಾರ್ಗದರ್ಶನದಲ್ಲಿ ಭಿತ್ತಿ ರಚನೆಯ ಗುತ್ತಿಗೆ ಪಡೆದುಕೊಂಡಿರುವ ಮೇಸ್ತ್ರಿ ಶ್ರೀ ಸಂಜೀವ ಚ0ದಳಿಕೆ ಅವರು ಭಿತ್ತಿ ಕಾಮಗಾರಿಯನ್ನು ಆರಂಭಿಸಿದರು. ಕಾಮಗಾರಿ ಉಸ್ತುವಾರಿ ಶ್ರೀ ಸುಂದರ ಪೂಜಾರಿ,ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -








