Saturday, September 26, 2026
spot_imgspot_img
spot_imgspot_img

ಅಕ್ರಮ, ನಿಯಮ ಉಲ್ಲಂಘಿಸಿ ರಾಜಾರೋಷವಾಗಿ ನಡೆಯುತ್ತಿದೆ ವಿಟ್ಲದ ಬಾಕ್ಸೈಟ್ ಮಾಫಿಯಾ!

- Advertisement -
- Advertisement -

ವಿಟ್ಲ: ಕರ್ನಾಟಕ-ಕೇರಳ ಗಡಿಭಾಗದ ಕನ್ಯಾನ-ಪೈವಳಿಕೆ ಗ್ರಾಮದ ಪಾದೆಕಲ್ಲು, ಪಿಲಿಪಂಜರ, ಮೇರೋಟ್ಟು, ಪೆರೋಡಿ ಸರವು ಗುಡ್ಡದಲ್ಲಿ ಕಳೆದ ಐದಾರು ವರ್ಷಗಳಿಂದ ಬಾಕ್ಸೈಟ್ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ.

ಕೃಷಿ ಉದ್ದೇಶಕ್ಕೆ ಜಮೀನು ಸಮತಟ್ಟು ಮಾಡುವ ನೆಪದಲ್ಲಿ 1.30, 1.80 ಎಕರೆಗೆ ಕಾಟಾಚಾರದ ಪರವಾನಿಗೆ ಪಡೆದು, ಸರ್ಕಾರಿ ಭೂಮಿಯನ್ನು 40 ಅಡಿಗಿಂತಲೂ ಆಳವಾಗಿ ಬಗೆದು ಲೂಟಿ ಮಾಡಲಾಗಿದೆ. ಕೇರಳದಿಂದ ಮಣ್ಣು ಬಗೆದು ಕರ್ನಾಟಕದ ಪರವಾನಿಗೆಯಲ್ಲಿ ವಿಟ್ಲ ಮೂಲಕ ಸಾಗಾಟ ಮಾಡಲಾಗುತ್ತಿದ್ದು, ಇದರ ಹಿಂದೆ ಸುರತ್ಕಲ್ ಮೂಲದ ಪ್ರಭಾವಿ ರಾಜಕೀಯ ಮುಖಂಡನ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಶ್ನಿಸಿದವರಿಗೆ ಗೂಂಡಾಗಳಿಂದ ಬೆದರಿಕೆ ಹಾಕಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಕುರುಡರಾಗಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಕರ್ನಾಟಕ-ಕೇರಳ ಅಧಿಕಾರಿಗಳ ಜಂಟಿ ತಂಡ 5 ದಿನಗಳಿಂದ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಡ್ರೋಣ್ ಮೂಲಕ ಸರ್ವೆ ನಡೆಸಿ ಲಾರಿ ಸಂಚಾರ ತಡೆದು, ಆರೋಪಿ ವಿರುದ್ಧ ಕ್ರಮಕ್ಕೆ ಸಜ್ಜಾಗಿದೆ.

- Advertisement -

Related news

error: Content is protected !!