Monday, September 28, 2026
spot_imgspot_img
spot_imgspot_img

ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ, ಪುತ್ತೂರು ದ.ಕ ಇದರ ಆಶ್ರಯದಲ್ಲಿ ಯು. ಆರ್. ಪ್ರಾಪರ್ಟಿಸ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವರ ಸಹಯೋಗದೊಂದಿಗೆ “ನಮ್ಮ ಕೈಕಾರಡ್ ಕೆಸರ್‌ಡೊಂಜಿ ದಿನ”

- Advertisement -
- Advertisement -

ಉದ್ಯಮ ಕ್ಷೇತ್ರದ ಸಾಧಕ ದಿವಾಕರ್ ದಾಸ್ ನೇರ್ಲಾಜೆ ಮತ್ತು ಸಹಕಾರಿ ಕ್ಷೇತ್ರದ ಸಾಧಕ ಶಶಿಕುಮಾರ್ ರೈ ಬಾಲ್ಯೊಟ್ಟು ಸೇರಿದಂತೆ ಹಲವು ಕ್ಷೇತ್ರದ ಸಾಧಕರಿಗೆ "ಸಹ್ಯಾದ್ರಿ ಸಿರಿ" 2026 ಪ್ರಶಸ್ತಿ ಪ್ರಧಾನ

ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ, ಪುತ್ತೂರು ದ.ಕ. ಇದರ ಆಶ್ರಯದಲ್ಲಿ ಯು.ಆರ್‍. ಪ್ರಾಪರ್ಟಿಸ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವರ ಸಹಯೋಗದೊಂದಿಗೆ “ನಮ್ಮ ಕೈಕಾರ್‌ಡ್ ಕೆಸರ್‌ಡೊಂಜಿ ದಿನ” ಕಾರ್ಯಕ್ರಮವು ಸೆ. 27 ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಪಳ್ಳತ್ತಾರಿನ ಶ್ರೀ ಜುಮಾದಿ ದೈವಸ್ಥಾನದ ಬಳಿಯ ದಿ. ಸರಸ್ವತಿ ಹೊಸಲಕ್ಕೆ ಅವರ ಗದ್ದೆಯಲ್ಲಿ ನವೀನ್ ರೈ ಪನಡ್ಕ-ಕೈಕಾರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಅವರು ದೀಪ ಪ್ರಜ್ವಲಿಸಿ, ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಶಶಿಕಿರಣ್ ಕೈಕಾರ, ಸುಂದರ ರೈ ಪನಡ್ಕ, ಶಿವರಾಮ ಆಳ್ವ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಂಬಳದ ಕೋಣಗಳನ್ನು ಮೆರವಣಿಗೆ ಮೂಲಕ ಬಂದು ಕೆಸರು ಗದ್ದೆಗೆ ಇಳಿಯುವುದರ ಮೂಲಕ ಚಾಲನೆ ನೀಡಲಾಯಿತು.

ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸೇರಿದಂತೆ ಸಾರ್ವಜನಿಕರಿಗೆ ಹಲವು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

ಸಂಜೆ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ “ಸಹ್ಯಾದ್ರಿ ಸಿರಿ” 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉದ್ಯಮ ಕ್ಷೇತ್ರದಲ್ಲಿ ಸಾಧನಗೈದ ಸಾಧಕ ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ. ಮೈಸೂರು ಇದರ ಮಾಲಕರು, ದಿವಾಕರ್ ದಾಸ್ ನೇರ್ಲಾಜೆ, ಶಶಿಕುಮಾರ್ ರೈ ಬಾಲ್ಯೊಟ್ಟು – ಕರ್ನಾಟಕ ರಾಜ್ಯ ಸಹಕಾರ ಸಂಘದ ನಿರ್ದೇಶಕರು (ಮೈಸೂರು ವಿಭಾಗ), ಶಶಾಂಕ ಶಂಕರ ನೆಲ್ಲಿತ್ತಾಯ – ದೈವಾರಾಧನೆ (ಮಧ್ಯಸ್ಥರು), ಬಾಲಕೃಷ್ಣ ಪೊರ್ದಾಳ್ – ನಿರೂಪಕರು, ಸುಂದರ ರೈ ಮಂದಾರ – ಕಲಾಕ್ಷೇತ್ರ, ಇವರಿಗೆ ಸಹ್ಯಾದ್ರಿ ಸಿರಿ” 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ.ಜೆ. ಅವರಿಗೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಅಶ್ಮಿತ್ ನ ಹಾಡಿಗೆ ಜನರು ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕಿಶೋರ್ ಕುಮಾರ್ ಬೊಟ್ಯಾಡಿ, ರಾಧಾಕೃಷ್ಣ ರೈ ಬೂಡಿಯಾರ್, ಸಂತೋಷ್ ಕುಮಾರ್ ರೈ ಕೈಕಾರ, ರಾಮದಾಸ್ ಶಟ್ಟಿ ವಿಟ್ಲ, ಪ್ರಸನ್ನ ಮಾರ್ತ, ಶಿವಕುಮಾರ್, ಕೃಷ್ಣಪ್ರಸಾದ್ ಆಳ್ವ, ಗೀತಾ ಡಿ ಶೆಟ್ಟಿ, ಯತೀಶ್ ದೇವ, ನಿಮಿತ ಎನ್ ರೈ, ರಂಜಿನಿ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮತ್ತು ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ ಇದರ ಗೌರವಾಧ್ಯಕ್ಷರಾದ ಪ್ರಜ್ವಲ್ ರೈ ತೊಟ್ಲ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!