Saturday, October 3, 2026
spot_imgspot_img
spot_imgspot_img

ಸಿಎನ್‌ಜಿ ತುಂಬಿಸುವಾಗ ಕಾರಿನ ಸಿಲಿಂಡರ್ ಸ್ಫೋಟ – ಕಾರು ಛಿದ್ರ ಛಿದ್ರ

- Advertisement -
- Advertisement -

ಗಾಂಧಿನಗರ: ಕಾರಿಗೆ ಸಿಎನ್‌ಜಿ ತುಂಬಿಸುವಾಗ ಸಿಲಿಂಡರ್ ಸ್ಫೋಟಗೊಂಡು ಕಾರು ಛಿದ್ರ ಛಿದ್ರವಾದ ಘಟನೆ ಗುಜರಾತ್‌ನ ಕರ್ಜನ್‌ನಲ್ಲಿ ನಡೆದಿದೆ. ಈ ಸ್ಫೋಟದಿಂದ ಪಕ್ಕದಲ್ಲಿದ್ದ ಎರಡು ವಾಹನಗಳಿಗೂ ಹಾನಿಯಾಗಿದೆ.

ಕರ್ಜನ್‌ನ ರಾಷ್ಟ್ರೀಯ ಹೆದ್ದಾರಿ-48 ರಲ್ಲಿರುವ ಸಿಎನ್‌ಜಿ ಪಂಪ್‌ನಲ್ಲಿ ಕಾರಿಗೆ ಸಿಎನ್‌ಜಿ ತುಂಬಿಸುತ್ತಿದ್ದಾಗ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಪಂಪ್‌ನಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರು ಭಯದಿಂದ ಓಡಿಹೋಗಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸ್ಫೋಟದ ತೀವ್ರತೆಗೆ ಕಾರಿನ ಲೋಹದ ಭಾಗಗಳು ಮತ್ತು ಗಾಜಿನ ಚೂರುಗಳು ತುಂಬಾ ದೂರದವರೆಗೆ ಹಾರಿ ಬಿದ್ದಿದ್ದವು. ಕಾರಿನಲ್ಲಿ ಯಾರು ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸ್ಫೋಟದ ಬಗ್ಗೆ ಮಾಹಿತಿ ಪಡೆದ ಕರ್ಜನ್ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಪಂಪ್‌ನಲ್ಲಿರುವ ಸುರಕ್ಷತಾ ವ್ಯವಸ್ಥೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!