Sunday, October 4, 2026
spot_imgspot_img
spot_imgspot_img

ಗುಂಡಿನ ದಾಳಿಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮ್ಯಾಡ್ ಸಂಧು ಬಲಿ

- Advertisement -
- Advertisement -

ಚಂಡೀಗಢ: LGBTQ ಸಮುದಾಯದ ಸಾಮಾಜಿಕ ಜಾಲತಾಣದ ಪ್ರಭಾವಿ ಮತ್ತು ಮೇಕಪ್ ಕಲಾವಿದ ಮದ್ ಸಂಧು ಅವರನ್ನು ಅಮೃತಸರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ರಸ್ತೆಯಲ್ಲಿ ಗುಂಡಿನ ದಾಳಿ ನಡೆದ ಬಳಿಕ ರಕ್ತದ ಮಡುವಿನಲ್ಲಿ ಸಂಧು ಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸಂಧು ತಮ್ಮ LGBTQ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಂದನೆಯನ್ನು ಎದುರಿಸುತ್ತಿದ್ದರು. ಟ್ರೋಲ್ ಹೊರತಾಗಿಯೂ, ಅವರು ಆನ್‌ಲೈನ್‌ನಲ್ಲಿ ಸಕ್ರಿಯರಾಗಿದ್ದರು. ಇನ್ಸ್ಟಾದಲ್ಲಿ 2.26 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಅವರು ಹೊಂದಿದ್ದರು. ಅವರು ಪಂಜಾಬಿ ಚಲನಚಿತ್ರ ಓಯೆ ಭೋಲೆ ಓಯೆಯಲ್ಲಿಯೂ ನಟಿಸಿದ್ದರು ಎನ್ನಲಾಗಿದೆ.

ಪಾಡ್‌ಕ್ಯಾಸ್ಟ್‌ಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮೇಕಪ್ ಆರ್ಟ್, ಸ್ವಯಂ ಅಭಿವ್ಯಕ್ತಿ ಮತ್ತು ಲಿಂಗ-ಸಂಬಂಧಿತ ವಿಷಯಗಳ ಬಗ್ಗೆ ಸಂಧು ಆಗಾಗ ಚರ್ಚಿಸುತ್ತಿದ್ದರು. ಅವರ ಫ್ಯಾಷನ್ ಆಯ್ಕೆಗಳು ಮತ್ತು ಚರ್ಚಿಸುವ ವಿಚಾರಗಳು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟೀಕೆಗೆ ಗುರಿಯಾಗುತ್ತಿತ್ತು.

ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ವೈರಲ್‌ ಪೋಸ್ಟ್‌ನಲ್ಲಿ ಹತ್ಯೆ ಹೊಣೆ ಹೊತ್ತಿದ್ದಾರೆ ಎನ್ನಲಾದ ಗೋಲ್ಡಿ ಧಿಲ್ಲೋನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಗೋಲ್ಡಿ ಬ್ರಾರ್‌ನ ಆಪ್ತ ಸಹಾಯಕನಾದ ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಜರ್ಮನಿಯಲ್ಲಿ ಕೆಲವು ತಿಂಗಳು ಕಳೆದ ನಂತರ ಯುಕೆ ನಲ್ಲಿ ಅಡಗಿರಬಹುದು ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.

ವಿದೇಶದಿಂದಲೇ ‘ಹಿಟ್ ಸ್ಕ್ವಾಡ್‌’ಗಳ (ಹಂತಕರ ತಂಡಗಳ) ಮೂಲಕ ಚಂಡೀಗಢದ ಸೆಕ್ಟರ್ 11 ರಲ್ಲಿ ಕೆಮಿಸ್ಟ್ ಅಂಗಡಿಯ ಕ್ಯಾಷಿಯರ್ ಜಾನಕಿ ದಾಸ್ ಅವರ ಹತ್ಯೆಯ ಹಿಂದೆ (ಜೂನ್ 2026) ಈತನ ಕೈವಾಡ ಇದೆ ಎಂದು ಪೊಲೀಸರು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
.

- Advertisement -

Related news

error: Content is protected !!