


ಅಡ್ಯನಡ್ಕ: JO ATTACKERS ADYANADKA ಇದರ ಆಶ್ರಯದಲ್ಲಿ ಶ್ರೀ ರಾಮ್ ಪ್ರೀಮಿಯರ್ ಲೀಗ್ ಸೀಸನ್ – 3 ಇದೇ ನ.21 ಮತ್ತು ನ.22 ರಂದು ನಡೆಯಲಿದೆ.
ನ.21 ರಂದು ಬೆಳಿಗ್ಗೆ 7.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನ.22 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ವಿಷ್ಣುಮೂರ್ತಿ ಗ್ರೌಂಡ್ ಕೊಲ್ಲಪದವು, ಅಡ್ಯನಡ್ಕ ಇಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಪುಣಚ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಜನಾರ್ಧನ ಭಟ್ ಅಮೈ ಅವರು ನೆರವೇರಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾದ ರಾಜೀವ ಭಂಡಾರಿ ಕುದ್ದುಪದವು ಮತ್ತು ಜಯರಾಮ ರೈ ಮೂಡಂಬೈಲು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ RSS ಬದಿಯಡ್ಕ ಖಂಡ ಸೇವಾ ಪ್ರಮುಖ್ ಕೃಷ್ಣಪ್ರಸಾದ್ ಬದಿಯಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಪುತ್ತೂರಿನ ಪ್ರಮೋದ್ ಕುಮಾರ್, ಪುತ್ತೂರು ಬಿಜೆಪಿ ವ್ಯಾಪಾರ ಪ್ರಕೋಷ್ಠ ಸಂಚಾಲಕರಾದ ಉಜ್ವಲ್ ಪ್ರಭು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಹುಮಾನ ವಿತರಣೆಯನ್ನು ಬಿಜೆಪಿ ಗ್ರಾಮಾಂತರ ಮಂಡಲ ಪುತ್ತೂರು ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಅವರು ನೆರವೇರಿಸಲಿದ್ದಾರೆ.








