Sunday, October 4, 2026
spot_imgspot_img
spot_imgspot_img

ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ ಮುಖಂಡನ ಗುಂಡಿಕ್ಕಿ ಹತ್ಯೆ – ಇನ್ನೋವಾ ಅಡ್ಡಗಟ್ಟಿ 13 ಸುತ್ತು ಫೈರಿಂಗ್

- Advertisement -
- Advertisement -

ಪಂಜಾಬ್‌ನ ಲುಧಿಯಾನದಲ್ಲಿ ಶಿರೋಮಣಿ ಅಕಾಲಿ ದಳದ ನವತೇಜ್ ಸಿಂಗ್ ಅಲಿಯಾಸ್ ನೀತು ಹತ್ಯೆಗೀಡಾಗಿದ್ದಾರೆ. ಶನಿವಾರ ಮನೆಗೆ ಮರಳುತ್ತಿದ್ದಾಗ ಲಾಧುವಾಲ್‌ನಲ್ಲಿ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ.

ನವತೇಜ್‌ ಸಿಂಗ್‌ ಅವರ ಟೊಯೊಟಾ ಇನ್ನೋವಾ ವಾಹನವನ್ನು ಅಡ್ಡಗಟ್ಟಿ ಇಬ್ಬರು ದುಷ್ಕರ್ಮಿಗಳು 13 ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಕೊಲೆ ದೃಶ್ಯವು ನವತೇಜ್‌ ಅವರ ಇನ್ನೋವಾ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲೂ ಸೆರೆಯಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಸಿಂಗ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!