Thursday, October 8, 2026
spot_imgspot_img
spot_imgspot_img

ಬಾಡಿಗೆ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಅವಘಡ: ತಾಯಿ, ಮಗು ಸಾವು

- Advertisement -
- Advertisement -

ಬೆಂಗಳೂರು: ನಾಯಂಡಹಳ್ಳಿಯ ವಿನಾಯಕ ಲೇಔಟ್‌ನ ಬಾಡಿಗೆ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ, ಮೂರು ವರ್ಷದ ಮಗು ಮೃತಪಟ್ಟಿದೆ.

ಅಕ್ಟೋಬ‌ರ್ 3ರಂದು ಮುಂಜಾನೆ ಅವಘಡ ಸಂಭವಿಸಿತ್ತು.ಕರಿಲಿಂಗಪ್ಪ(47) ಹಾಗೂ ಲಕ್ಷ್ಮಮ್ಮ(45) ದಂಪತಿ ಹಾಗೂ ಚೈತ್ರಾ(11), ಬಸವನಗೌಡ(9) ಹಾಗೂ ಮೂರು ವರ್ಷದ ಅವಳಿ ಹೆಣ್ಣು ಮಕ್ಕಳಾದ ಗೀತಾ ಹಾಗೂ ಗಿರಿಜಾ ಗಾಯಗೊಂಡಿದ್ದರು.

ಲಕ್ಷ್ಮಮ್ಮ ಹಾಗೂ ಅವಳಿ ಮಕ್ಕಳ ಪೈಕಿ ಗಿರಿಜಾ ಮೃತಪಟ್ಟಿದೆ. ಗಂಭೀರವಾಗಿ ಗಾಯಗೊಂಡಿರುವ ಕರಿಲಿಂಗಪ್ಪ ಅವರ ಸ್ಥಿತಿ ಸಹ ಗಂಭೀರವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.ರಾಯಚೂರಿನ ಕರಿಲಿಂಗಪ್ಪ ಲಕ್ಷ್ಮಮ್ಮ ದಂಪತಿ ವಿನಾಯಕ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಂದು ಬೆಳಿಗ್ಗೆ 7ರ ಸುಮಾರಿಗೆ ಅಡುಗೆ ಕೊಠಡಿಯಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಿಂದ ಬೆಂಕಿ ಸಂಭವಿಸಿತ್ತು. ಲಕ್ಷ್ಮಮ್ಮ ಅವರಿಗೆ ಶೇ 70ರಷ್ಟು ಹಾಗೂ ಕರಿಲಿಂಗಪ್ಪಗೆ ಶೇ 45ರಷ್ಟು ಸುಟ್ಟು ಗಾಯಗಳಾಗಿದ್ದವು.

ಆರು ಮಂದಿಯನ್ನು ಅಕ್ಕಪಕ್ಕದ ಮನೆಯವರೇ ರಕ್ಷಿಸಿ, ಹೊರಗೆ ಕರೆತಂದಿದ್ದರು. ಬಳಿಕ ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

- Advertisement -

Related news

error: Content is protected !!