- Advertisement -
- Advertisement -


ಬೆಂಗಳೂರು : ಸಚಿವರು, ಲೋಕಸಭಾ ಹಾಗೂರಾಜ್ಯಸಭಾ ಸದಸ್ಯರಿಗೆ ಹೊಸ ವಾಹನ ಖರೀದಿಸಲು ನಿಗದಿಪಡಿಸಿದ ಆರ್ಥಿಕ ಮಿತಿಯನ್ನು 26 ಲಕ್ಷ ರೂ. ಗಳಿಂದ 31 ಲಕ್ಷ ರೂ.ಗಳಿಗೆ ಪರಿಷ್ಕರಿಸಿ ನಿಗದಿಪಡಿಸಲಾಗಿದೆ.

ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಇಂಧನ ಮಿತವ್ಯಯ ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಹೊಂದಿರುವ ವಾಹನಗಳನ್ನು ಡಿಜಿಎಸ್ಡಿ ದರಗಳಿಗೆ ಒಳಪಟ್ಟು ಖರೀದಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

- Advertisement -








