ದೇರಳಕಟ್ಟೆ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ಹಾಗೂ ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡ ಲಯನ್ಸ್ ಕ್ಷೇಮ ವಿಜಿನ್ ಕೆಆರ್ ಯೋಜನೆಯನ್ನು ಜಿಲ್ಲಾ ರಾಜ್ಯಪಾಲ ಲಯನ್ ತಾರಾನಾಥ್ ಎಚ್.ಎಂ. ಲೋಕಾರ್ಪಣೆಗೊಳಿಸಿದರು.

ಯೋಜನೆಯ ವಿವರವನ್ನು ಮಾಜಿ ಜಿಲ್ಲಾ ರಾಜ್ಯಪಾಲ ಡಾ. ಶಾಂತರಾಮ ಶೆಟ್ಟಿ ನೀಡಿದರು. ಲಯನ್ಸ್ನ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಲ್ಟಿಪಲ್ನ ಮಾಜಿ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.ಪ್ರಥಮ ಉಪರಾಜ್ಯಪಾಲ ಲಯನ್ ಗೋವರ್ಧನ ಶೆಟ್ಟಿ ಹಾಗೂ ದ್ವಿತೀಯ ಉಪರಾಜ್ಯಪಾಲ ಲಯನ್ ವೆಂಕಟೇಶ ಹೆಬ್ಬಾರ್ ಶುಭ ಹಾರೈಸಿದರು. ವೇದಿಕೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಚೇರ್ಮನ್ ವಿಶಾಲ್ ಹೆಗ್ಡೆ, ಡಾ. ಎಂ.ಎಸ್. ಮೂಡಿತ್ತಾಯ ಹಾಗೂ ಡಾ. ಹರ್ಷ ಹಲಹಳ್ಳಿ ಉಪಸ್ಥಿತರಿದ್ದರು.

ಲಯನ್ಸ್ ಕ್ಯಾಬಿನೆಟ್ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ನಿಕಟಪೂರ್ವ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ, ನಿಕಟಪೂರ್ವ ಜಿಲ್ಲಾ ರಾಜ್ಯಪಾಲರ ಸಂಯೋಜಕ ಜ್ಯೋತಿ ಎಸ್. ಶೆಟ್ಟಿ, ಕ್ಯಾಬಿನೆಟ್ ಸಂಯೋಜಕ ಲೋಕೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಡಾ. ರಿಷಿಕೇಶ್ ಅಮೀನ್ ವಂದಿಸಿದರು.
ವಿಜಯ ವಿಷ್ಣುಮಯ್ಯ ಕಾರ್ಯಕ್ರಮ ನಿರೂಪಿಸಿದರು. ಈ ಕುರಿತು ಜಿಲ್ಲೆಯ ನಿಕಟಪೂರ್ವ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







