Tuesday, October 13, 2026
spot_imgspot_img
spot_imgspot_img

(ಅ.16-20) ಶ್ರೀ ದೇವತಾ ಸಮಿತಿ ವಿಟ್ಲ ಆಶ್ರಯದಲ್ಲಿ 55ನೇ ವರ್ಷದ ವಿಟ್ಲ ಶಾರದೋತ್ಸವ

- Advertisement -
- Advertisement -

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ದ.ಕ. ಆಶ್ರಯದಲ್ಲಿ 55ನೇ ವರ್ಷದ ವಿಟ್ಲ ಶಾರದೋತ್ಸವ ಕಾರ್ಯಕ್ರಮವು ಅ.16ನೇ ಶುಕ್ರವಾರದಿಂದ 20ನೇ ಮಂಗಳವಾರದವರೆಗೆ ವಿಟ್ಲದ ಶ್ರೀಮತ್ ಅನಂತೇಶ್ವರ ದೇವಸ್ಥಾನದ “ಪರಿಜ್ಞಾನ ಅತಿಥಿಗ್ರಹ”ದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ದಿನಾಂಕ ಅ. 16 ಶುಕ್ರವಾರ ಬೆಳಗ್ಗೆ ಗಂಟೆ 7:00ಕ್ಕೆ ಗಣಪತಿ ಹವನ ನಡೆದು ಬಳಿಕ 8:00ಕ್ಕೆ ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಯಲಿದೆ.
8:30ಕ್ಕೆ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆದು 9:00ಕ್ಕೆ ಶ್ರೀ ಮಾತೆಯ ವಿಗ್ರಹವನ್ನು ಶ್ರೀ ಚಂದ್ರನಾಥ ಸ್ವಾಮಿ ನವಿಲು ಬಸದಿಯಿಂದ ಉತ್ಸವದ ಸ್ಥಳಕ್ಕೆ ಪ್ರತಿಷ್ಠಾ ವಿಧಿ ಕಾರ್ಯಕ್ರಮಕ್ಕೆ ಮೆರವಣಿಗೆಯಲ್ಲಿ ತರುವುದು. ಬಳಿಕ 10:20ಕ್ಕೆ ವೇದಮೂರ್ತಿ ಶ್ರೀ ಎಂ. ವಿಕಾಸ್ ಭಟ್, ಪುರೋಹಿತರು, ಶ್ರೀರಾಮ ಮಂದಿರ ಹನುಮಗಿರಿ ವಿಟ್ಲ ಇವರಿಂದ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠೆ ನಡೆದು ಶ್ರೀ ದೇವತಾ ಸಮಿತಿ, ವಿಟ್ಲ ಇದರ ಗೌರವಾಧ್ಯಕ್ಷ ಎಂ. ರಾಧಾಕೃಷ್ಣ ನಾಯಕ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಾರ್ಯಕ್ರಮವನ್ನು ಮಾಜಿ ಲೋಕಸಭಾ ಸದಸ್ಯರು ಹಾಗೂ ನಿಕಟ ಪೂರ್ವ ರಾಜ್ಯಾಧ್ಯಕ್ಷರು ಬಿಜೆಪಿ ಕರ್ನಾಟಕ ನಳಿನ್ ಕುಮಾರ್‍ ಕಟೀಲು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು ಶ್ರೀ ದೇವತಾ ಸಮಿತಿ ವಿಟ್ಲ ಇವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ| ಅರುಣ್ ಶ್ಯಾಮ್ ಸ್ವತಂತ್ರ ಹೆಚ್ಚುವರಿ ನಿರ್ದೇಶಕರು ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಹಾಗೂ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಗಳು , ಅಶೋಕ್ ಕುಮಾರ್‍ ಶೆಟ್ಟಿ ಅಧ್ಯಕ್ಷರು ಸ್ಥಾಯಿ ಸಮಿತಿ ಪಟ್ಟಣ ಪಂಚಾಯತ್ ವಿಟ್ಲ , ಲಯನ್ ಡಾ| ಗಾಯತ್ರಿ ಜಿ ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ,ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12: 30ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7:45ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ದಿವ್ಯ ಜ್ಯೋತಿ ಕಲಾವಿದರು, ಎರುಂಬು, ಅಭಿನಯಿಸುವ ಮೋಹನ್ ದಾಸ್ ರೈ ಎರುಂಬು ನಿರ್ದೇಶನದ ತುಳು ಹಾಸ್ಯಮಯ, ಸಾಂಸಾರಿಕ ನಾಟಕ “ಕೇಂಡ್ ದ್ ಕೆಟ್ಟೊಡ್ಚಿ” ನಡೆಯಲಿದೆ. ರಾತ್ರಿ 9:30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ 17 ಶನಿವಾರ ಪೂರ್ವಾಹ್ನ ಗಂಟೆ 7:00ಕ್ಕೆ ಪ್ರಸನ್ನ ಪೂಜೆ, 10:00ಕ್ಕೆ ಸಂಗೀತ ಸ್ಪರ್ಧೆ (ಭಕ್ತಿಗೀತೆಗಳು ಮಾತ್ರ ) ಬಳಿಕ 11:30ಕ್ಕೆ ವಂದೇ ಮಾತರಂ ( ಕಂಠಪಾಠ ) ಬಳಿಕ 12:00ಕ್ಕೆ ದೇವರ ಚಿತ್ರ ರಚನೆ ( ಪೆನ್ಸಿಲ್‌ನಲ್ಲಿ ಮಾತ್ರ ) ನಡೆಯಲಿದೆ. ಮಧ್ಯಾಹ್ನ ಗಂಟೆ 12: 30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ 3:00ಕ್ಕೆ ರಂಗವಲ್ಲಿ ಸ್ಪರ್ಧೆ ನಡೆಯಲಿದೆ.

ಸಂಜೆ 7 ಗಂಟೆಗೆ ಸುಧಾ ತನಯ ನಾಮಾಂಕಿತ ವೇದಮೂರ್ತಿ ಶ್ರೀ ವಿಜಯ್ ಕುಮಾರ್‍ ಭಟ್ ಮತ್ತು ಬಳಗ, ಶ್ರೀ ಸಾರಸ್ವತ ಭಜನಾಮಂಡಳಿ ವಿಟ್ಲ ಇವರಿಂದ “ಭಜನ್ ಸಂಧ್ಯಾ” ನಡೆಯಲಿದೆ , 9:00ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ.18 ಆದಿತ್ಯವಾರ ಪೂರ್ವಾಹ್ನ ಗಂಟೆ 7:00ಕ್ಕೆ ಪ್ರಸನ್ನ ಪೂಜೆ ನಡೆದು ಬಳಿಕ 10:00ಕ್ಕೆ ಶ್ರೀಮದ್ ಭಗವದ್ಗೀತಾ ಅಧ್ಯಾಯ 16ರ ಶ್ಲೋಕಗಳು 1-15, ಗೀತಾ ಕಂಠಪಾಠ ಸ್ಪರ್ಧೆ ನಡೆಯಲಿದೆ. 11:30ಕ್ಕೆ ಹೂಹಾರ ಸ್ಪರ್ಧೆ ( ಈ ಸ್ಪರ್ಧೆಗೆ ಬೇಕಾದ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು ) ನಡೆಯಲಿದೆ. ಮಧ್ಯಾಹ್ನ ಗಂಟೆ 12: 30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ 3:00ಕ್ಕೆ “ಇಂದಿನ ಶಿಕ್ಷಣ ಪಠ್ಯ ಕ್ರಮದಲ್ಲಿ ರಾಮಾಯಣ , ಮಹಾಭಾರತ ಮತ್ತು ಭಗವದ್ಗೀತೆಯ ಪಾಠಗಳು ಅವಶ್ಯಕವೇ?” ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ. ಸಂಜೆ 6:00ಕ್ಕೆ ವಿಶೇಷ ದೀಪಾಲಂಕಾರದೊಂದಿಗೆ “ರಂಗಪೂಜೆ” ನಡೆದ ನಂತರ 7ರಿಂದ 9 ರವರೆಗೆ ಶ್ರೀ ಗೋಪಾಲಕೃಷ್ಣ ಭಜನಾಮಂಡಳಿ ಮಿಜಾರ್‌ ಎಡಪದವು ಇವರಿಂದ ” ಭಜನಾಮೃತ” ನಡೆಯಲಿದೆ. ರಾತ್ರಿ ಗಂಟೆ 9:00ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ.19 ಸೋಮವಾರದಂದು ಬೆಳಿಗ್ಗೆ ಗಂಟೆ 7:00ಕ್ಕೆ ಪ್ರಸನ್ನ ಪೂಜೆ ನಡೆದು ಬಳಿಕ 10:00ಕ್ಕೆ ಛದ್ಮವೇಷ ಸ್ಪರ್ಧೆ- 15 ವರ್ಷದ ಒಳಗಿನವರಿಗೆ ( ದೇವತೆಗಳು ಮತ್ತು ಭಾರತದ ಮಹಾಪುರುಷರ ವೇಷಗಳು ಮಾತ್ರ ) ನಡೆಯಲಿದೆ. ಮಧ್ಯಾಹ್ನ ಗಂಟೆ 1:00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ಕ್ಕೆ ಝೀ ಕನ್ನಡ ಸರಿಗಮಪ ಜೂನಿಯರ್‍ಸ್ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ವಿಜೇತ ಮಾಸ್ಟರ್ ಅಚಿಂತ್ಯ ರೈ ಮಂಗಳೂರು ಇವರಿಂದ ” ಗಾನಮೃತ” ನಡೆಯಲಿದೆ. ರಾತ್ರಿ ಗಂಟೆ 9:30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ. 20 ಮಂಗಳವಾರ ವಿಜಯದಶಮಿಯಂದು ಬೆಳಿಗ್ಗೆ ಗಂಟೆ 7:00ಕ್ಕೆ ಪ್ರಸನ್ನ ಪೂಜೆ ನಡೆದು ಬಳಿಕ 8:00ಕ್ಕೆ ಅಕ್ಷರ ಅಭ್ಯಾಸ ನಡೆಯಲಿದೆ. ಬಳಿಕ 11:30ಕ್ಕೆ ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು ಶ್ರೀ ದೇವತಾ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಅಳಿಕೆಯ ಪ್ರಾಂಶುಪಾಲರಾದ ವೆಂಕಟಕೃಷ್ಣ ಶರ್ಮಾ ಬಿ, ರೋಟರಿ ಕ್ಲಬ್ ವಿಟ್ಲದ ದಾಸಪ್ಪ ಪೂಜಾರಿ ಎನ್ , ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರು ಲಯನ್ ಶ್ವೇತಾ ರವಿಕುಮಾರ್‍ , ಜೆಸಿಐ ವಿಟ್ಲದ ಅಧ್ಯಕ್ಷರು ಜೆಸಿ ಸಂದೀಪ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ವಿಸರ್ಜನಾ ಆರತಿ, ಅನ್ನಸಂತರ್ಪಣೆ ನಡೆದ ನಂತರ 3:00ಕ್ಕೆ ಕರ್ನಾಟಕ ಕಲಾಶ್ರೀ ಡಾ| ಪಿ.ಕೆ. ದಾಮೋದರ್‍ ಮತ್ತು ಬಳಗದವರಿಂದ “ವಾದ್ಯಗೋಷ್ಠಿ” ನಡೆಯಲಿದೆ. ಸಂಜೆ ಗಂಟೆ 4:30ಕ್ಕೆ ಆಕರ್ಷಕ ಸ್ತಬ್ಧ ಚಿತ್ರದೊಂದಿಗೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆದ ಬಳಿಕ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ, “ವಂದೇ ಮಾತರಂ”, “ಧ್ವಜಾವತರಣ” ನಡೆದ ನಂತರ ಕೆರೆಯಲ್ಲಿ ಶ್ರೀ ದೇವಿಯ ವಿಗ್ರಹ ವಿಸರ್ಜನೆ ನಡೆಯಲಿದೆ.

- Advertisement -

Related news

error: Content is protected !!