- Advertisement -
- Advertisement -


ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆಗೆ ಜೀವಬೆದರಿಕೆ ಹಾಕಿ, ಕಲ್ಲು ಎಸೆದು ಗಾಯಗೊಳಿಸಿ ಮನೆ ಕಿಟಕಿ ಗಾಜಿಗೆ ಹಾನಿ ಮಾಡಿದ ಆರೋಪದಲ್ಲಿ ಸೊಸೆಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬದ ಕೊಯಿಲ ನಿವಾಸಿ ನೀಲಮ್ಮ (70) ಅವರು ನೀಡಿದ ದೂರಿನಂತೆ, ಅವರ ಸೊಸೆ ಮಂಗಳಾ ಬಾಯಿ ಅ.13ರಂದು ಮನೆಗೆ ಬಂದು ಜೀವಬೆದರಿಕೆ ಹಾಕಿದ್ದರು. ಬಳಿಕ ಅ.14ರ ರಾತ್ರಿ ಮನೆಯ ಕಿಟಕಿ ಗಾಜಿಗೆ ಕಲ್ಲು ಎಸೆದು ಹಾನಿಗೊಳಿಸಿದ್ದು, ಇದೇ ವೇಳೆ ನೀಲಮ್ಮ ಅವರಿಗೂ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಘಟನೆಯಿಂದ ಸುಮಾರು ₹30,000 ನಷ್ಟ ಉಂಟಾಗಿದ್ದು, ಗಾಯಗೊಂಡ ನೀಲಮ್ಮ ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2026ರಂತೆ BNS ಕಲಂ 352, 351(2), 118(1), 324(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
- Advertisement -








