Thursday, October 22, 2026
spot_imgspot_img
spot_imgspot_img

ಬೆಂಗಳೂರು | ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್, ನಗದು ಪತ್ತೆ

- Advertisement -
- Advertisement -

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್‌ಗಳು ಹಾಗೂ ನಗದು ಪತ್ತೆಯಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.ಜೈಲು ಅಧಿಕಾರಿಗಳು ನಡೆಸಿದ ದಿಢೀರ್ ಪರಿಶೀಲನೆ ವೇಳೆ ಮಹಿಳಾ ಬ್ಯಾರಕ್‌ನ ಕೈದಿಯೊಬ್ಬರ ಬಳಿ ₹11,900 ನಗದು ಪತ್ತೆಯಾಗಿದೆ. ಪುರುಷರ ಬ್ಯಾರಕ್‌ನಲ್ಲಿ ಮುಹಮ್ಮದ್ ನವಾಝ್ ಎಂಬ ಕೈದಿಯ ಬಳಿ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ಮಾಲೇಶ್ ಎಂಬಾತನ ಬಳಿ ಕೀಪ್ಯಾಡ್ ಫೋನ್ ಪತ್ತೆಯಾಗಿದೆ.

ಕೈದಿಗಳ ಬಳಿ ಮೊಬೈಲ್ ಫೋನ್‌ಗಳು ಮತ್ತು ನಗದು ಪತ್ತೆಯಾದ ಹಿನ್ನೆಲೆಯಲ್ಲಿ, ಅವು ಜೈಲಿನೊಳಗೆ ಹೇಗೆ ಬಂದವು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!