Saturday, October 24, 2026
spot_imgspot_img
spot_imgspot_img

ಉದ್ರಿ ನೀಡಲು ನಿರಾಕರಣೆ – ಚಾಕುವಿನಿಂದ ಇರಿದು ಹೋಟೆಲ್ ಮಾಲಕನ ಹತ್ಯೆ

- Advertisement -
- Advertisement -

ರಾಯಚೂರು: ಉದ್ರಿ ನೀಡಲು ನಿರಾಕರಿಸಿದ್ದಕ್ಕೆ ಹೋಟೆಲ್ ಮಾಲಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಎಲ್‌ಬಿಎಸ್‌ ನಗರದ ಕ್ರೌನ್ ಬೇಕರಿ ಬಳಿ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನಡೆದಿದೆ.ಮೃತರನ್ನು ಬಾಪೂರು ನರಸಿಂಹ (38) ಎಂದು ಗುರುತಿಸಲಾಗಿದೆ.ಎಲ್‌ಬಿಎಸ್‌ ನಗರದ ಕೌನ್ ಬೇಕರಿ ಬಳಿ ಹಲವು ವರ್ಷಗಳಿಂದ ಟೀ ಶಾಪ್ ಹಾಗೂ ಹೋಟೆಲ್ ನಡೆಸುತ್ತಿದ್ದ ನರಸಿಂಹ ಅವರು ಎಂದಿನಂತೆ ಶನಿವಾರವೂ ವ್ಯಾಪಾರದಲ್ಲಿ ತೊಡಗಿದ್ದರು. ಈ ವೇಳೆ ಹೋಟೆಲ್‌ಗೆ ಬಂದ ಆರೋಪಿ, ಹಣ ನೀಡದೆ ಹೋಟೆಲ್‌ನ ವಸ್ತುಗಳನ್ನು ಕೇಳಿದ್ದಾನೆ.

ನರಸಿಂಹ ಅವರು ನಿರಾಕರಿಸಿದಾಗ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ಶಾಂತವೀರ, ಸಿಪಿಐ ಉಮೇಶ್ ಕಾಂಬ್ಳೆ ಹಾಗೂ ಮಾರ್ಕೆಟ್ ಯಾರ್ಡ್ ಪೊಲೀಸ್‌ ಠಾಣೆಯ ಪಿಎಸ್‌ಐ ಇಸಾಕ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!