- Advertisement -
- Advertisement -
ಇಂದು ಮಧ್ಯಾಹ್ನ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ



ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಧರ್ಮಪತ್ನಿ ಉಷಾಕುಮಾರಿ (56) ಅವರು ಅಸೌಖ್ಯದಿಂದ ಅಕ್ಟೋಬರ್ 24 ರ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರ ಅಂತಿಮ ದರ್ಶನವು ಭಾನುವಾರ (ಅಕ್ಟೋಬರ್ 25) ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಹ್ಯಾಟ್ ಹಿಲ್ನಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ.
ವಿನಾಯಕ ಅಪಾರ್ಟೆಂಟ್, ಡೋರ್ ನಂಬರ್ 102, ಕರಾವಳಿ ಉತ್ಸವ ಮೈದಾನದ ಮುಂಭಾಗದ ರಸ್ತೆ, ಹ್ಯಾಟ್ ಹಿಲ್, ಮಂಗಳೂರು
ಅಂತಿಮ ಸಂಸ್ಕಾರ ಮಧ್ಯಾಹ್ನ 12.30ಕ್ಕೆ ಕದ್ರಿ ರುದ್ರ ಭೂಮಿ ಯಲ್ಲಿ ನಡೆಯಲಿದೆ.
- Advertisement -








