Sunday, October 25, 2026
spot_imgspot_img
spot_imgspot_img

ಸೈಬರ್ ಕ್ರೈಂ -1.71 ಲಕ್ಷ ರೂ. ವಂಚನೆ ಆರೋಪ; ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು, ಅ.24: ಅಪರಿಚಿತ ವ್ಯಕ್ತಿಯೊಬ್ಬ ಟ್ರಾಫಿಕ್ ಫೈನ್ ಲಿಂಕ್ ಕಳುಹಿಸಿ 1.71 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.43 ವರ್ಷದ ದೂರುದಾರರು ಅ.18ರಂದು ಬೆಳಗ್ಗೆ ಮೊಬೈಲ್ ನೋಡುತ್ತಿರುವಾಗ ಅವರ ಕಾರಿನ ಟ್ರಾಫಿಕ್ ರೆಕಾರ್ಡ್ ರಿವೈ ಎಂಬ ಬಗ್ಗೆ ಲಿಂಕ್ ಬಂದಿದೆ. ಆ ಮೇಸೆಜ್ ನ್ನು ನೋಡಿ ಅವರು ಸುಮ್ಮನಿದ್ದರು.

ಮರುದಿನ ಅ.19ರಂದು ಅದೇ ನಂಬರ್ ನಿಂದ ಪುನಃ ಟ್ರಾಫಿಕ್ ಇ ಪೆನಾಲ್ಟಿ ಎಂಬುದಾಗಿ ಬೇರೆ ಲಿಂಕ್ ಬಂದಿದೆ.ಮೇಸೆಜ್ ನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಎಂ ಪರಿವಾಹನ್ ಎಂಬ ಹೆಸರಿನ ಆ್ಯಪ್ ಡೌನ್ ಲೋಡ್ ಆಗಿದೆ.

ಅನಂತರ ಅ.20ರಂದು 6ಗಂಟೆಯಿಂದ 6.30 ಗಂಟೆಯವರೆಗೆ ಪಿರ್ಯಾದಿದಾರರ ಮೊಬೈಲ್ ನಂಬರ್‌ಗೆ ಬೇರೆ ಬೇರೆ ನಂಬರ್ ಳಿಂದ ಸುಮಾರು 100 ಟೆಕ್ಸ್ ಮೇಸೆಜ್ ಗಳು ಬಂದಿದೆ.

ಅನುಮಾನ ಬಂದು ಪರಿಶೀಲಿಸಿದಾಗ ಅವರ ಎರಡು ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 1,71,599 ರೂ. ಅಪರಿಚಿತನ ಖಾತೆಗೆ ವರ್ಗಾವಣೆಯಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!