- Advertisement -
- Advertisement -
*

ಪುತ್ತೂರು: ಪುತ್ತೂರಿನಲ್ಲಿ 8 ಮಂದಿ ಕಾಂಗ್ರೆಸ್ ನಾಯಕರಿಗೆ ಅವಕಾಶ ಸಿಗಲಿಲ್ಲ, ಆದರೆ ಒಂಬತ್ತನೇ ವ್ಯಕ್ತಿಗೆ ಟಿಕೆಟ್ ಸಿಕ್ಕಿದ್ದು ಹೇಗೆ? ಎಂದು ಪ್ರಶ್ನಿಸಿ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಿಗೆ ಗತಿ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ದಯಾನಂದ ಶೆಟ್ಟಿ ಉಜಿರೆಮಾರು , ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಗತಿ ಇಲ್ಲದಿರಬಹುದು, ಆದರೆ ಭ್ರಷ್ಟಾಚಾರ ಮಾಡಿ ತಿನ್ನುವುದಿಲ್ಲ. ಪ್ರಶ್ನೆ ಗಣಿತದ ಬಗ್ಗೆ ಕೇಳಿದರೆ ಸಮಾಜಶಾಸ್ತ್ರದ ಬಗ್ಗೆ ಉತ್ತರ ಬರುತ್ತದೆ. ಅಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
- Advertisement -








