Wednesday, October 28, 2026
spot_imgspot_img
spot_imgspot_img

ಪುತ್ತೂರು ಶಾಸಕರ ಅಭಿವೃದ್ಧಿ ಎಲ್ಲಿದೆ, ರೀಲ್ಸ್ ಫ್ಲೆಕ್ಸ್ ನಲ್ಲಿ ಮಾತ್ರ ಇದೆ; ಅಶೋಕ್ ರೈ ವಿರುದ್ಧ ಪ್ರಸನ್ನ ದರ್ಬೆ ವಾಗ್ದಾಳಿ

- Advertisement -
- Advertisement -

ಪುತ್ತೂರು: ಲಕ್ಷಾಂತರ ಕಾರ್ಯಕರ್ತರ ಭಾವನೆಗೆ ಪುತ್ತೂರು ಶಾಸಕರು ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಸನ್ನ ದರ್ಬೆ ಶಾಸಕ ಅಶೋಕ್ ರೈ ವಿರುದ್ಧ ಕಿಡಿಕಾರಿದ್ದಾರೆ.

ಪುತ್ತೂರು ಸ್ವಾಭಿಮಾನದ ನೆಲ, ಹಿಂದೂತ್ವದ ನೆಲ, ಇಲ್ಲಿ ಯಾರು ಗುಲಾಮರಲ್ಲ ಎಂದು ಹೇಳಿರುವ ಅವರು, ಲಕ್ಷಾಂತರ ಕಾರ್ಯಕರ್ತರ ಭಾವನೆಗೆ ಪುತ್ತೂರು ಶಾಸಕರು ಅವಮಾನ ಮಾಡಿದ್ದಾರೆ. ಶಾಸಕರ ಘನತೆಗೆ ತಕ್ಕಂತೆ ಮಾತನಾಡಬೇಕು, ಬಾಯಿಗೆ ಬಂದಂತೆ ಮಾತನಾಡಿ ಊರಿನ ಮಾನ ಹರಾಜು ಹಾಕಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಎಲ್ಲಿದೆ, ರೀಲ್ಸ್ ಫ್ಲೆಕ್ಸ್ ನಲ್ಲಿ ಮಾತ್ರ ಇದೆ. ಹಳ್ಳಿಯ ರಸ್ತೆ ನೋಡಿದರೆ ರಸ್ತೆಯೇ ಇಲ್ಲ, ಗುಂಡಿಯೇ ರಸ್ತೆ ಆಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಶಾಸಕ ಅಶೋಕ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

Related news

error: Content is protected !!