ತಿರುವನಂತಪುರಂ: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ 17 ವರ್ಷದ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಸ್ಕೂಟರ್ ವೊಂದಕ್ಕೆ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣವನ್ನು ಅಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂಬ ವ್ಯಾಪಕ ಟೀಕೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಕೊಚ್ಚಿ ನಗರ ಪೊಲೀಸ್ ಆಯುಕ್ತ ಕಲಿರಾಜ್ ಮಹೇಶ್ ಕುಮಾರ್ ರನ್ನು ವರ್ಗಾಯಿಸಲಾಗಿದೆ.

ಅಪಘಾತ ಪ್ರಕರಣದ ತನಿಖೆಯಲ್ಲಿ ಲೋಪವಾಗಿದೆ ಎಂದು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ಒಪ್ಪಿಕೊಂಡ ಬೆನ್ನಿಗೇ, ಸರಕಾರ ಈ ಕ್ರಮ ಕೈಗೊಂಡಿದೆ. ಈ ಲೋಪಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಅಕ್ಟೋಬರ್ 25ರಂದು ಕೊಚ್ಚಿಯಲ್ಲಿ ನಡೆದಿದ್ದ ಈ ಅಪಘಾತದಲ್ಲಿ ನ್ಯಾಯಾಧೀಶರೊಬ್ಬರ 17 ವರ್ಷದ ಅಪ್ರಾಪ್ತ ಪುತ್ರನು ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಸ್ಕೂಟರ್ ವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್ ಸವಾರ ಜಯಬಾಲಕೃಷ್ಣನ್ ಎಂಬುವರು ಮೃತಪಟ್ಟಿದ್ದರು. ಈ ಪ್ರಕರಣವನ್ನು ಹಳಿ ತಪ್ಪಿಸಲು ಪಿತೂರಿ ನಡೆಯುತ್ತಿದೆ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಆರೋಪಿಸಿದ್ದರು.
ಆರೋಪಿ ಬಾಲಕನಿಗೆ ಎರಡು ಬಾರಿ ಜಾಮೀನು ಮಂಜೂರಾಗಿದ್ದರಿಂದ, ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಘಟನೆಯ ಉತ್ತರದಾಯಿತ್ವದ ಕುರಿತು ಸಾರ್ವಜನಿಕರು ಪ್ರಶ್ನೆಯೆತ್ತಿದ್ದಾರೆ.

ನ್ಯಾಯಾಧೀಶರ ನಿವಾಸದ ಮೇಲೆ ಪೊಲೀಸರಿಂದ ದಾಳಿ
ಕೊಚ್ಚಿ ನಗರ ಪೊಲೀಸ್ ಆಯುಕ್ತ ಕಲಿರಾಜ್ ಮಹೇಶ್ ಕುಮಾರ್ ರನ್ನು ವರ್ಗಾವಣೆ ಮಾಡುವುದಕ್ಕೂ ಒಂದು ದಿನ ಮುನ್ನ, ಮಂಗಳವಾರ ಪೊಲೀಸರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನಿವಾಸದಲ್ಲಿ ಶೋಧ ಕಾರ್ಯ ಕೈಗೊಂಡರು ಹಾಗೂ ತನಿಖೆಯ ಭಾಗವಾಗಿ ನಿವಾಸದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದರು.
ಮೋಟಾರ್ ವಾಹನಗಳ ಕಾಯ್ದೆಯ ಸೆಕ್ಷನ್ 199ಎ ಅಡಿ ನ್ಯಾಯಾಧೀಶರನ್ನು ಆರೋಪಿ ಎಂದು ಹೆಸರಿಸಿದ ಬೆನ್ನಿಗೇ, ಈ ಶೋಧ ಕಾರ್ಯ ನಡೆಯಿತು. ಈ ಕಾಯ್ದೆಯ ಪ್ರಕಾರ, ಈ ಕಾಯ್ದೆಯ ಪ್ರಕಾರ, ಯಾರಾದರೂ ಅಪ್ರಾಪ್ತರು ಅಪರಾಧ ಕೃತ್ಯವೆಸಗಿದರೆ, ಅಂತಹ ಅಪ್ರಾಪ್ತರ ಪೋಷಕರು ಅಥವಾ ವಾಹನದ ಮಾಲಕರನ್ನು ಹೊಣೆಗಾರರನ್ನಾಗಿಸಲಾಗುತ್ತದೆ.