Friday, October 30, 2026
spot_imgspot_img
spot_imgspot_img

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ; 12ನೇ ಆರೋಪಿ ಅಮನ್ ಬಂಧನ

- Advertisement -
- Advertisement -

ಮುಂಬೈ: ನಟ ಟೈಗರ್ ಶ್ರಾಫ್ ಅವರ ಮೇಲೆ ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಪೊಲೀಸರ ಅಪರಾಧ ವಿಭಾಗವು, ಹರಿಯಾಣದ ಸೋನಿಪತ್ ಜಿಲ್ಲೆಯಿಂದ 12ನೇ ಆರೋಪಿ ಅಮನ್ ಎಂಬಾತನನ್ನು ಬಂಧಿಸಿದೆ. ಈತ ಈಗಾಗಲೇ ಬಂಧಿತನಾಗಿರುವ ಕುನಾಲ್ ಜಮಿನ್‌ಸಿಂಗ್ ಎಂಬಾತನ ಆಪ್ತನಾಗಿದ್ದ.

ಕುನಾಲ್ ಜಮಿನ್‌ಸಿಂಗ್, ಅಪರಾಧ ಕೃತ್ಯಕ್ಕೆ ಬಳಸಲಾದ ಟರ್ಕಿ ನಿರ್ಮಿತ ‘ಜಿಗಾನಾ’ ಪಿಸ್ತೂಲ್ ಅನ್ನು ಪೂರೈಸಿದ್ದನೆಂದು ಆರೋಪಿಸಲಾಗಿದೆ.

ಹರಿಯಾಣ ಪೊಲೀಸರ ಸಹಯೋಗದೊಂದಿಗೆ ಸೋನಿಪತ್ ಜಿಲ್ಲೆಯ ಖಾರ್ಖೋಡಾ ತಹಸಿಲ್ ವ್ಯಾಪ್ತಿಯ ರೋಹ್ನಾ ಗ್ರಾಮದಿಂದ ಅಮನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಶಂಕಿಸಲಾದ ಅನಿಲ್ ಪಂಡಿತ್ ಎಂಬಾತನಿಂದ ಅಮನ್ ತನ್ನ ಬ್ಯಾಂಕ್ ಖಾತೆಗೆ ಹಣ ಪಡೆದಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ, ನಟನ ಮೇಲಿನ ದಾಳಿಯ ಹೊಣೆಯನ್ನು ಅನಿಲ್ ಪಂಡಿತ್ ತಾನೇ ಹೊತ್ತುಕೊಂಡಿದ್ದ.

ಅಮನ್ ತನ್ನ ಬ್ಯಾಂಕ್ ಖಾತೆಗೆ ಪಂಡಿತ್‌ನಿಂದ ಹಣವನ್ನು ಪಡೆದಿದ್ದ. ಆ ಹಣವನ್ನು ಅವನು ಡ್ರಾ ಮಾಡಿ ಕುನಾಲ್ (ಜಮ್‌ಸಿಂಗ್) ಎಂಬಾತನಿಗೆ ನೀಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಣವನ್ನು ಶಸ್ತ್ರಾಸ್ತ್ರವೊಂದನ್ನು ಖರೀದಿಸಲು ಬಳಸಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ, ಆ ಶಸ್ತ್ರಾಸ್ತ್ರವನ್ನು ಮುಂಬೈನಲ್ಲಿ ಇಬ್ಬರು ಶಂಕಿತ ಶೂಟರ್‌ಗಳಿಗೆ (ರೆಹಾನ್ ಅನ್ಸಾರಿ ಮತ್ತು ಫೂಲ್ ಸಿಂಗ್) ಹಸ್ತಾಂತರಿಸಲಾಗಿತ್ತು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!