Friday, October 30, 2026
spot_imgspot_img
spot_imgspot_img

ಸೌಜನ್ಯ ಅತ್ಯಾಚಾರ & ಕೊಲೆ ಪ್ರಕರಣ;‌ ತನಿಖೆ ನಡೆಸಿದ್ದ ಕೆಳಸ್ತರದ ಪೊಲೀಸರು, ಸಿಬ್ಬಂದಿಗೆ SIT ನೋಟಿಸ್‌

- Advertisement -
- Advertisement -

ಮಂಗಳೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಕೆಳಸ್ತರದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಸ್‌ಐಟಿ ನೋಟಿಸ್‌ ನೀಡಿದೆ.

ಸೌಜನ್ಯ ಕೇಸ್ ಮರುತನಿಖೆ ನಡೆಯುತ್ತಿದ್ದು, ಅಂದಿನ ತನಿಖಾಧಿಕಾರಿಗಳ ವಿಚಾರಣೆ ಬೆನ್ನಲ್ಲೇ SI, ASI, PC, ಹೆಡ್ ಕಾನ್‌ಸ್ಟೇಬಲ್, ರೈಟರ್‌ಗಳಿಗೆ ಎಸ್‌ಐಟಿ ನೋಟಿಸ್ ನೀಡಿದೆ. ಇಂದು ಕೆಳಸ್ತರದ ಅಧಿಕಾರಿಗಳು, ಸಿಬ್ಬಂದಿ ವಿಚಾರಣೆ ನಡೆಯಲಿದೆ.

ತನಿಖೆ ತೀವ್ರಗೊಳಿಸಿರುವ ಎಸ್‌ಐಟಿ ಸುಮಾರು 8 ಅಧಿಕಾರಿ ಹಾಗೂ ಸಿಬ್ಬಂದಿಗೆ ಬುಲಾವ್ ನೀಡಿದೆ. ಎಲ್ಲಾ ಆಯಾಮಗಳಲ್ಲೂ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.

ಪೊಲೀಸ್ ಅಧಿಕಾರಿಗಳ ವಿಚಾರಣೆ ಬೆನ್ನಲ್ಲೇ ಫೊರೆನ್ಸಿಕ್ ಟೀಂ, ವೈದ್ಯರ ವಿಚಾರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಸೌಜನ್ಯ ಪ್ರಕರಣದ ಮರುತನಿಖೆ ಪೂರ್ಣಗೊಳಿಸಲು 50-60 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದವರಿಗೆ ಎಸ್‌ಐಟಿ ತುರ್ತು ಬುಲಾವ್ ನೀಡಿದೆ.

- Advertisement -

Related news

error: Content is protected !!