Sunday, May 5, 2024
spot_imgspot_img
spot_imgspot_img

ಅಳಿಕೆ : (ಏ.25 – 26 ) ಶ್ರೀ ಪಿಲಿಚಾಮುಂಡಿ [ಕಲ್ಲೆಂಚಿನಾಯ) ದೈವಸ್ಥಾನ ಕಲ್ಲೆಂಚಿಪಾದೆ-ಅಳಿಕೆ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮತ್ತು ನೇಮೋತ್ಸವ

- Advertisement -G L Acharya panikkar
- Advertisement -

ಅಳಿಕೆ : ಶ್ರೀ ಪಿಲಿಚಾಮುಂಡಿ [ಕಲ್ಲೆಂಚಿನಾಯ) ದೈವಸ್ಥಾನ ಕಲ್ಲೆಂಚಿಪಾದೆ-ಅಳಿಕೆ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮತ್ತು ನೇಮೋತ್ಸವವು ದಿನಾಂಕ : 25-04-2024ನೇ ಗುರುವಾರದಿಂದ 26-04-2024ನೇ ಶುಕ್ರವಾರದ ವರೆಗೆ ನಡೆಯಲಿದೆ.

ಏಪ್ರಿಲ್ 25ರಂದು ಬೆಳಿಗ್ಗೆ ಗಂಟೆ 11-00ಕ್ಕೆ ಗ್ರಾಮದ ಎಲ್ಲಾ ಭಾಗಗಳಿಂದ ಹಸಿರುವಾಣಿಯು ಬೆಳಿಗ್ಗೆ ಗಂಟೆ 10:30ಕ್ಕೆ ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನಕ್ಕೆ ಬಂದು ತಲುಪುವುದು ನಂತರ ಹಸಿರುವಾಣಿ ಮೆರವಣಿಗೆ ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನದಿಂದ ಹೊರಡುವುದು. ಮಧ್ಯಾಹ್ನ 12-30ರಿಂದ : ಅನ್ನಸಂತರ್ಪಣೆ ಜರಗಳಿದೆ.

ಸಂಜೆ 5-00ರಿಂದ ತಂತ್ರಿಗಳ ಆಗಮನ, ಶಿಲ್ಪಿಗಳಿಂದ ಸ್ಥಾನ ಪರಿಗ್ರಹ ಪಂಚಗವ್ಯ. ಪುಣ್ಯಾಹವಾಚನ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಯಶ್ಚಿತ್ತ ಕಲಜಾಭಿಷೇಕ, ಪೀಠಾಧಿವಾಸ, ಪ್ರಕಾರ ಬಲಿ, ವಾಸ್ತು ಪೂಜೆ ನಂತರ ಸಂಜೆ 6-00ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು ಹಾಗೂ ರಾತ್ರಿ ಗಂಟೆ 8.30ಕ್ಕೆ ಅನ್ಯಸಂತರ್ಪಣೆ ಜರಗಳಿದೆ.

ಏಪ್ರಿಲ್ 25ರಂದು ಬೆಳಿಗ್ಗೆ ಗಂಟೆ 9.24ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ನೂತನ ಆರೋಧದಲ್ಲಿ ಗ್ರಾಮ ದೈವವಾದ ಶ್ರೀ ಪಿಲಿಚಾಮುಂಡಿ ದೈವವನ್ನು ಶ್ರೀ ಕಲ್ಲೆಂಜಿನಾಯ ಎಂಬ ಹೆಸರಿನಲ್ಲಿ ಶಿಲಾ ಪೀರದಲ್ಲಿ ಪ್ರತಿಷ್ಠೆ, ಕಲಶಾಭಿಷೇಕ, ಅಲಂಕಾರ ಪೂಜೆ, ತಂಬಿಲ, ನಂತರ ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 5-00ರಿಂದ ಅಳಿಕೆ ಗುತ್ತು ಮನೆಯಿಂದ ಶ್ರೀ ಪಿಲಿಚಾಮುಂಡಿ (ಕಲ್ಲೆಂಜಿನಾಯ) ದೈವದ ಭಂಡಾರ ಹೊರಡುವುದು.ನೂತನ ದೈವಸ್ಥಾನದಲ್ಲಿ ಭಂಡಾರ ಏರುವುದು, ತಂಬಿಲಸೇವೆ, ಎಣ್ಣೆಬೂಳ್ಯ ನಡೆಯಲಿದೆ ಬಳಿಕ ರಾತ್ರಿ ಗಂಟೆ 9 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 9.30 ರಿಂದ ದೈವದ ನೇಮೋತ್ಸವ ಪ್ರಾರಂಭವಾಗಲಿದೆ. ಎಂದು ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ಪಿಲಿಚಾಮುಂಡಿ ದೈವದ ಸೇವಾ ಸಮಿತಿ (ರಿ.) ಕಲ್ಲೆಂಚಿಪಾದೆ-ಅಳಿಕೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!