Sunday, November 1, 2026
spot_imgspot_img
spot_imgspot_img

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ನ.2ರಿಂದ ರಾಜ್ಯದಲ್ಲಿ ನಾಲ್ಕು ದಿನಗಳು ಮಳೆ ಸಾಧ್ಯತೆ

- Advertisement -
- Advertisement -

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ನ.2ರಿಂದ ನಾಲ್ಕು ದಿನಗಳ ಕಾಲ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಈ ವಾಯುಭಾರ ಕುಸಿತವೂ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಇದರಿಂದ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳ ಹಲವೆಡೆ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಪರಿಣಾಮ ಇತ್ತೀಚಿಗೆ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗಿತ್ತು. ಅಲ್ಲದೆ, ಅದು ತೀವ್ರ ಚಂಡ ಮಾರುತವಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ವಾತಾವರಣದಲ್ಲಿದ್ದ ತೇವಾಂಶವನ್ನು ಸೆಳೆದುಕೊಂಡಿತ್ತು.

ಇದರಿಂದ ರಾಜ್ಯದಲ್ಲಿ ಒಂದು ವಾರದಿಂದ ಮಳೆ ಪ್ರಮಾಣ ಕ್ಷೀಣಿಸಿತ್ತು. ಒಣಹವೆ ಮುಂದುವರೆದು ಚಳಿಯ ವಾತಾವರಣ ಕಂಡುಬಂದಿತ್ತು.

- Advertisement -

Related news

error: Content is protected !!