Saturday, November 7, 2026
spot_imgspot_img
spot_imgspot_img

ಕುಂಬಳೆ: ಸಿಡಿಲು ಬಡಿದು ಮನೆ ಹಾನಿ – ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮ

- Advertisement -
- Advertisement -

ಕುಂಬಳೆ: ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಕಾಸರಗೋಡು ಕುಂಬಳೆಯ ದೇವಿನಗರದಲ್ಲಿ ನಡೆದಿದೆ. ದೇವಿನಗರ ನಿವಾಸಿ ರಾಜನ್ ಅವರ ಮನೆಯಲ್ಲಿ ಸಂಜೆ 6 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.

ಮಿಂಚಿನ ಆಘಾತಕ್ಕೆ ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟುಹೋಗಿದ್ದು, ಸ್ವಿಚ್ ಬೋರ್ಡ್ಗಳು ಒಡೆದು ಚದುರಿವೆ. ಮನೆಯ ಕಾಂಕ್ರೀಟ್ ಗೋಡೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ. ಮನೆಯ ಎರಡನೇ ಮಹಡಿಯ ಕೋಣೆಗಳಿಗೆ ಮಿಂಚು ಬಡಿದ ಪರಿಣಾಮ ಟಿ.ವಿ. ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಂಡಿವೆ.

ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ರಾಜನ್, ಅವರ ಪತ್ನಿ ಸುಲೋಚನಾ ಹಾಗೂ ಮಕ್ಕಳಾದ ದೀಪಕ್ ಮತ್ತು ದೀಕ್ಷಿತ್ ಮನೆಯೊಳಗೇ ಇದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.

- Advertisement -

Related news

error: Content is protected !!