Wednesday, November 11, 2026
spot_imgspot_img
spot_imgspot_img

ಮದರ್ ಡೈರಿ ಹಾಲಿನ ದರ ಲೀ.ಗೆ 4 ರೂ.ವರೆಗೆ ಏರಿಕೆ – ನ.12ರಿಂದ ಹೊಸ ದರ ಜಾರಿ

- Advertisement -
- Advertisement -

ನವದೆಹಲಿ: ಮದರ್ ಡೈರಿ ಸಂಸ್ಥೆಯು ವಿವಿಧ ಮಾದರಿಯ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2ರಿಂದ 4 ರೂ.ಗೆ ಹೆಚ್ಚಿಸಿದ್ದು, ಪರಿಷ್ಕೃತ ದರ ನಾಳೆಯಿಂದ (ನ.12) ಜಾರಿಗೆ ಬರಲಿವೆ. ಹಾಲಿನ ದರ ಏರಿಕೆಯಿಂದ ಪ್ರತಿನಿತ್ಯ ಹಾಲು ಖರೀದಿಸುವ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.

ಮದರ್ ಡೈರಿಯ ಹೊಸ ದರದ ಪ್ರಕಾರ, ಫುಲ್ ಕ್ರೀಮ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 72 ರೂ.ಯಿಂದ 76 ರೂ.ಗೆ ಏರಿಕೆಯಾಗಿದೆ. ಅಂದರೆ ನಾಲ್ಕು ರೂ. ಹೆಚ್ಚಳವಾಗಿದೆ. ಪ್ಯಾಕೆಟ್ ಟೋನ್ಡ್ ಹಾಲಿನ ದರ 60 ರೂ.ಯಿಂದ 62 ರೂ.ಗೆ ಹೆಚ್ಚಿಸಲಾಗಿದೆ. ಡಬಲ್ ಟೋನ್ಡ್ ಹಾಲಿನ ಬೆಲೆ 54 ರೂ.ಯಿಂದ 56 ರೂ.ಗೆ ಏರಿಕೆಯಾಗಿದೆ. ಹಸುವಿನ ಹಾಲಿನ ದರ 62 ರೂ.ಯಿಂದ 65 ರೂ.ಗೆ ಹೆಚ್ಚಳವಾಗಿದೆ. ಇನ್ನು ಮುಕ್ತ ವಿತರಣೆಯ ಟೋನ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 58 ರೂ.ಯಿಂದ 60 ರೂ.ಗೆ ಏರಿಕೆಯಾಗಿದೆ.

ರೈತರಿಂದ ಹಾಲು ಖರೀದಿಸುವ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಲಿನ ಖರೀದಿ ವೆಚ್ಚ ಹೆಚ್ಚಾದ ಕಾರಣ ಹೆಚ್ಚುವರಿ ವೆಚ್ಚದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ಸಂಸ್ಥೆ ನಿರ್ಧರಿಸಿದೆ. ಮದರ್ ಡೈರಿ ತನ್ನ ಹಾಲಿನ ಮಾರಾಟದಿಂದ ಬರುವ ಒಟ್ಟು ಆದಾಯದ ಶೇ.75ರಿಂದ 80ರಷ್ಟು ಪಾಲನ್ನು ರೈತರಿಗೆ ಪಾವತಿಸುತ್ತದೆ ಎಂದು ವರದಿ ಮೂಲಕ ತಿಳಿಸಲಾಗಿದೆ.

- Advertisement -

Related news

error: Content is protected !!