

ಬಂಟ್ವಾಳ : ಬಿ.ಸಿ.ರೋಡಿನ ಪ್ರೈಓವರ್ ಮೇಲ್ಬಾಗದಲ್ಲಿ ಬೈಕೊಂದಕ್ಕೆ ಹಿಂಬದಿಯಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ 40 ಅಡಿ ಎತ್ತರದ ಫೈಓವರ್ ಮೇಲ್ಬಾಗದಿಂದ ಕೆಳಗೆ ಸರ್ವೀಸ್ ರಸ್ತೆಗೆ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.ಫೈಓವರ್ ಮೇಲಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಅವ್ ನೀಲ್ ಸಾವಿಯೋ ಡಿಸೋಜ ಎಂದು ಗುರುತಿಸಲಾಗಿದೆ.

ಇವರು ಬೈಕಿನಲ್ಲಿ ಬಿ.ಸಿ.ರೋಡಿನ ಪ್ರೈಓವರ್ ಮೇಲ್ಬಾಗದಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ದಿಯಾ ಕೊಠಾರಿ ಎಂಬಾಕೆ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಅಪಘಾತದ ತೀವ್ರತೆಗೆ ಅವ್ ನೀಲ್ ಸಾವಿಯೋ ಡಿಸೋಜ ಅವರು 40 ಅಡಿ ಎತ್ತರದ ಪ್ರೈಓವರ್ ಮೇಲಿಂದ ಕೆಳಗೆ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ಡಿ’ ಸೋಜ ಅವರ ಎದೆಗೆ, ಎಡ ಭುಜಕ್ಕೆ ಹೊಟ್ಟೆಗೆ, ಬೆನ್ನಿಗೆ ಹಾಗೂ ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು, ಹೆಲ್ಕೆಟ್ ಧರಿಸಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಇವರನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತಪಡಿಸಿದ ಬೈಕ್ ಸವಾರೆ ದಿಯಾ ಕೊಠಾರಿಗೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








