- Advertisement -
- Advertisement -



ವಿಟ್ಲ: ಶೋಕಮಾತೆ ಇಗರ್ಜಿಯ ಪರಮ ಪ್ರಸಾದವನ್ನು ಮೆರವಣಿಗೆಯಲ್ಲಿ ಇಗರ್ಜಿಯಿಂದ ವಿಟ್ಲದ ಜೈನ ಬಸದಿಯ ತನಕ ನಡೆದು, ಪುನಃ ಶೋಕಮಾತೆ ಇಗರ್ಜಿಗೆ ತರಲಾಯಿತು.


ಈ ಮೆರವಣಿಗೆಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಜ್ಯುಡಿಶಿಯಲ್ ವಿಗಾರ್ ಫಾ. ನವೀನ್ ಪಿಂಟೊ, ವಿಟ್ಲ ಚರ್ಚ್ ಧರ್ಮಗುರು ಫಾ. ಮೈಕೆಲ್ ಲೋಬೊ, ಫಾ. ಅಮಿತ್ ರೋಡ್ರಿಗಸ್, ಫಾ. ಮಾರ್ಷಲ್ ರೋಡ್ರಿಗಸ್, ವಿಟ್ಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ವಲೇರಿಯನ್, ಕಾರ್ಯದರ್ಶಿ ಶಾಲೆಟ್ ಪಾಯಿಸ್, ಆಯೋಗಗಳ ಅಧ್ಯಕ್ಷೆ ಜೆಸಿಂತಾ ಫರ್ನಾಂಡೀಸ್, ಕೆಥೊಲಿಕ್ ಸಭಾದ ಅಧ್ಯಕ್ಷ ಲೂವಿಸ್ ಮಸ್ಕರೇನಸ್, ಸದಸ್ಯರು ಹಾಗೂ ವಿಟ್ಲ ಚರ್ಚ್ ಅಧೀನದ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

- Advertisement -








