Sunday, November 15, 2026
spot_imgspot_img
spot_imgspot_img

ಪುತ್ತೂರು : ಬೆದ್ರಾಳ ಶ್ರೀ ರಕ್ತೇಶ್ವರಿ ಹಾಗೂ ಸಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

- Advertisement -
- Advertisement -

ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ

ಪುತ್ತೂರು : ಶ್ರೀ ನಾಗರಕ್ತೇಶ್ವರಿ ಪ್ರತಿಷ್ಠಾನ ಬೆದ್ರಾಳ ಆಶ್ರಯದಲ್ಲಿ ಡಿಸೆಂಬರ್‌ 23 ಹಾಗೂ 24 ರಂದು ಬೆದ್ರಾಳದ ಶ್ರೀಮಾ ಥೀಂ ಪಾರ್ಕ್‌ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತಾ ಯಕ್ಷಗಾನ ಮಂಡಳಿ ಅವರಿಂದ ಯಕ್ಷಗಾನ ಬಯಲಾಟ ಹಾಗೂ ಶ್ರೀ ರಕ್ತೇಶ್ವರಿ ಹಾಗೂ ಸಪರಿವಾರ ದೈವಗಳ ವಾರ್ಷಿಕ ನೇಮೋತ್ಸವವರು ವಿಜೃಂಭನೆಯಿಂದ ನಡೆಯಲಿದ್ದು, ಈ ಕುರಿತ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಬಿಡುಗಡೆ ಸಮಾರಂಭ ಇಂದು (ನ.15) ಬೆದ್ರಾಳದ ಶ್ರೀ ದೇವಿ ಭಜನಾ ಮಂದಿರದಲ್ಲಿ ನಡೆಯಿತು.

ಡಿ. 22 ಮಂಗಳವಾರದಂದು ಬೃಹತ್‌ ಹೊರೆಕಾಣಿಕೆ ಮೆರವಣಿಗೆಯು ಚೆಂಡೆನಾದದೊಂದಿಗೆ ಸಂಜೆ 04 ಗಂಟೆಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಿಂದ ಬೆದ್ರಾಳದ ಶ್ರೀಮಾ ಥೀಂ ಪಾರ್ಕ್‌ಗೆ ಹೊರಡಲಿದೆ. ಇದರ ರೂಪುರೇಷಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಡಿ. 23 ಬುಧವಾರದಂದು ಬೆದ್ರಾಳ ಶ್ರೀದೇವಿ ಭಜನಾ ಮಂದಿರದಲ್ಲಿ ಡಾ. ಕಿರಣ್‌ ಕುಮಾರ್‌ ಗಾನಸಿರಿ ಕಲಾಕೇಂದ್ರ ಅವರಿಂದ ಭಜನಾ ಕಾರ್ಯಕ್ರಮ ನಡೆದು, ಸಂಜೆ 6 ಗಂಟೆಯಿಂದ ಬೆದ್ರಾಳದ ಶ್ರೀಮಾ ಥೀಂ ಪಾರ್ಕ್‌ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಈ ನಿಟ್ಟಿನಲ್ಲಿ ಸಂಜೆ 5 ಗಂಟೆಗೆ ಚೌಕಿ ಪೂಜೆ ನಡೆದು ರಾತ್ರಿ 8 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.

(ಡಿ.24) ಗುರುವಾರದಂದು ಬೆಳಿಗ್ಗೆ ಗಣಪತಿ ಹೋಮ ಹಾಗೂ ನಾಗದೇವರಿಗೆ ತಂಬಿಲ ಮತ್ತು ದೈವಗಳಿಗೆ ತಂಬಿಲ ನೆರವೇರಲಿದೆ. ಸಂಜೆ 5 ಗಂಟೆಗೆ ದೈವಗಳ ಭಂಡಾರ ಇಳಿದು 7 ಗಂಟೆಗೆ ರಕ್ತೇಶ್ವರಿ ದೈವದ ನೇಮೋತ್ಸವ ನಡೆದು ರಾತ್ರಿ 8.30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಆ ಬಳಿಕ ರಾತ್ರಿ 9.30 ರಿಂದ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.

ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಬಿಡುಗಡೆ ಸಮಾರಂಭದಲ್ಲಿ ವಿವಿಧ ಸಮಿತಿಯನ್ನು ರಚಿಸಿ ಕಾರ್ಯಕ್ರಮದ ಯಶಸ್ಸಿನ ಕುರಿತಾಗಿ ಚರ್ಚಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!