Thursday, July 30, 2026
spot_imgspot_img
spot_imgspot_img

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿ ಶಾಸಕ ಎಸ್. ಅಂಗಾರ

- Advertisement -
- Advertisement -

ಬೆಂಗಳೂರು: ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಲಾಗಿದೆ.

6 ಬಾರಿ ಬಿಜೆಪಿ ಶಾಸಕರಾಗಿ ಕಡೆಗಣಿಸಲ್ಪಟ್ಟಿದ್ದ ಅಂಗಾರ ಅವರಿಗೆ ಕೊನೆಗೂ ಸಚಿವ ಪದವಿ ನೀಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿತ್ತು. ಹುಕ್ಕೇರಿ ಶಾಸಕ ಉಮೇಶ್ ಕತ್ತಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಸಾರ್ವಜನಿಕ ಹಾಗೂ ಸಂಪರ್ಕ ಇಲಾಖೆ, ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ.

ಮುರುಗೇಶ್ ನಿರಾಣಿಯವರಿಗೆ ಇಂಧನ, ಎಂಟಿಬಿ ನಾಗರಾಜ್ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆ, ಆರ್. ಶಂಕರ್ ಅವರಿಗೆ ಅಬಕಾರಿ ಖಾತೆ ಹಾಗೂವಸಿ.ಪಿ. ಯೋಗೇಶ್ವರ್ ಅವರಿಗೆ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ನೀಡಲಾಗಿದೆ.

- Advertisement -

Related news

error: Content is protected !!