Thursday, May 2, 2024
spot_imgspot_img
spot_imgspot_img

ಕಾಸರಗೋಡು: ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ- ಪ್ರಾಧ್ಯಾಪಕ ಅಮಾನತು

- Advertisement -G L Acharya panikkar
- Advertisement -

ಕಾಸರಗೋಡು: ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನಲೆಯಲ್ಲಿ ಪೆರಿಯ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ.

ಇಂಗ್ಲೀಷ್ ಪ್ರಾಧ್ಯಾಪಕ ಇಫ್ತಿಕಾರ್ ಅಹಮ್ಮದ್ ನನ್ನು ಅಮಾನತು ಗೊಳಿಸಿ ಆದೇಶ ನೀಡಲಾಗಿದೆ. ನ.13 ರಂದು ಘಟನೆ ನಡೆದಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ವಿಶ್ವ ವಿದ್ಯಾನಿಲಯ ಆಂತರಿಕ ಸಮಿತಿ ನಡೆಸಿದ ಪ್ರಾಥಮಿಕ ತನಿಖೆಯಿಂದ ಘಟನೆ ನಡೆದ ಬಗ್ಗೆ ಬಯಲಿಗೆ ಬಂದ ಹಿನ್ನಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.

ಇಂಟರ್ನಲ್ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದು , ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತಿದ್ದಾಗ ಅನುಚಿತವಾಗಿ ವರ್ತಿಸಿದ್ದು, , ಅಶ್ಲೀಲವಾಗಿ ಮಾತನಾಡಿದ್ದಾಗಿ ವಿದ್ಯಾರ್ಥಿನಿ ಉಪಕುಲಪತಿ ರವರಿಗೆ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಪ್ರಾಧ್ಯಾಪಕನಿಗೆ ಎರಡು ವಾರಗಳ ಕಾಲ ತರಗತಿ ನಡೆಸುವುದಕ್ಕೆ ನಿಷೇಧ ಹೇರಲಾಗಿತ್ತು . ವಿಶ್ವ ವಿದ್ಯಾನಿಲಯದ ಆಂತರಿಕ ವಿಭಾಗ ತನಿಖೆ ನಡೆಸಿ ಬಳಿಕ ಕ್ರಮ ತೆಗೆದುಕೊಂಡಿದೆ. ಪ್ರಾಧ್ಯಾಪಕ ನನ್ನು ಅಮಾನತುಗೊಳಿಸುವಂತೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.

- Advertisement -

Related news

error: Content is protected !!