Saturday, November 21, 2026
spot_imgspot_img
spot_imgspot_img

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ರಜತ ಸಂಭ್ರಮ: ವಾರ್ಷಿಕೋತ್ಸವ- ಕ್ರೀಡೋತ್ಸವ

- Advertisement -
- Advertisement -

ಒಡಿಯೂರು: ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ರಜತ ಸಂಭ್ರಮ – ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವವು ನವೆಂಬರ್ 23 ಮತ್ತು 24 ರಂದು ವಿಜೃಂಭಣೆಯಿಂದ ನಡೆಯಲಿದೆ.

ನ. 23, ಸೋಮವಾರದಂದು ಬೆಳಗ್ಗೆ 10.00 ಗಂಟೆಗೆ ಉದ್ಘಾಟನೆ ನಡೆಯಲಿದೆ. ಉದ್ಘಾಟನೆ ಮತ್ತು ಆಶೀರ್ವಚನವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನೀಡಲಿದ್ದು, ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ.

ಅತಿಥಿಗಳಾಗಿ ಶ್ರೀಮತಿ ಮಾಲತಿ ಕಾನತ್ತಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಂಟ್ವಾಳ ವಲಯ, ಜಯರಾಮ ರೈ ಡಿ, ಪ್ರಾಂಶುಪಾಲರು, ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲ, ಡಾ. ಮಧುರಾ ಕೆ. ಸಹಾಯಕ ಪ್ರಾಧ್ಯಾಪಕರು, ಯೆನೆಪೋಯ ಇನ್ಸ್ಟಿಟ್ಯೂಟ್, ಮಂಗಳೂರು, ದಯಾನಂದ ಶೆಟ್ಟಿ ಬಾಕ್ರಬೈಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಇವರು ಭಾಗವಹಿಸಲಿದ್ದಾರೆ.

ಗಂಟೆ 11.30 ರಿಂದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಪರಾಹ್ನ 2.00 ರಿಂದ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಲಿದೆ.

ನ. 24, ಮಂಗಳವಾರ ಬೆಳಗ್ಗೆ 9.30 ಗಂಟೆಗೆ ಸಾಂಸ್ಕೃತಿಕ ವೈವಿಧ್ಯ, ಬೆಳಗ್ಗೆ 11.00 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾರೋಪ ಸಮಾರಂಭದ ಅನುಗ್ರಹ ಸಂದೇಶವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನೀಡಲಿದ್ದು, ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತರಿರುವರು.

ಅತಿಥಿಗಳಾಗಿ ಶಶಿಧರ ಬಿ. ಎಸ್. ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ದ.ಕ., ಡಾ. ವಿ. ಕೆ. ಹೆಗ್ಡೆ, ಖ್ಯಾತ ವೈದ್ಯರು, ಪುಷ್ಪಕ್ ಹೆಲ್ತ್ ಸೆಂಟರ್, ವಿಟ್ಲ, ದಯಾನಂದ ಕಟೀಲು, ಪ್ರಾಂಶುಪಾಲರು, ಶಾರದಾ ವಿದ್ಯಾಲಯ, ಮಂಗಳೂರು, ಎ. ಕೃಷ್ಣ ಭಟ್, ವಿಶ್ರಾಂತ ಮುಖ್ಯ ಶಿಕ್ಷಕರು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ ಇವರು ಭಾಗವಹಿಸಲಿದ್ದಾರೆ.

ಗಂಟೆ 1.30 ರಿಂದ ಸಾಂಸ್ಕೃತಿಕ ವೈವಿಧ್ಯ, ಬಳಿಕ ಸಂಜೆ ಗಂಟೆ 4.30 ರಿಂದ ಕ್ರೀಡೋತ್ಸವ ನಡೆಯಲಿದೆ ಎಂದು ಶಾಲಾ ಸಂಚಾಲರು ಮತ್ತು ಆಡಳಿತ ಮಂಡಳಿ, ವಿದ್ಯಾರ್ಥಿ ನಾಯಕ ಹಾಗೂ ವಿದ್ಯಾರ್ಥಿಗಳು, ಮುಖ್ಯಶಿಕ್ಷಕಿ ಮತ್ತು ಶಿಕ್ಷಕ ವೃಂದದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!