- Advertisement -
- Advertisement -
ವಿಟ್ಲ: ವಿಟ್ಲ ಪಂಜಿಗದ್ದೆ ಫಾರ್ಮ್ ನಲ್ಲಿ ಪಂಚಮಿ ಸೂಪರ್ ಮಾರ್ಕೆಟ್ ಜ.15ರಂದು ಶುಭಾರಂಭಗೊಳ್ಳಲಿದೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಬಲಿಪಗುಳಿ ಇಕೋ ಬ್ಲಿಸ್ ನ ಮಾಲಕರಾದ ಸಿ.ಜಿ. ರಾಜಾರಾಮ ಬಲಿಪಗುಳಿ, ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ನಿಕಟಪೂರ್ವ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಎನ್. ಪ್ರಶಾಂತ್, ವಿಟ್ಲ ಶ್ರೀಮಾತಾ ಕನ್ಸ್ಟ್ರೆಕ್ಷನ್ ನ ಇಂಜಿನಿಯರ್ ಸತ್ಯಗಣೇಶ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಬಗೆಯ ದಿನಸಿ ಐಟಂಗಳು, ಹಾರ್ಡ್ವೇರ್ ಸಾಮಾಗ್ರಿ, ಬೇಕರಿ ಉತ್ಪನ್ನಗಳು, ತರಕಾರಿಗಳು,ಸ್ಟೆಶನರಿ ಐಟಂಗಳು, ಪತಂಜಲಿ ಉತ್ಪನ್ನಗಳು, ಗ್ರಾಮರಾಜ್ಯ ಉತ್ಪನ್ನಗಳು, ಪೂಜಾ ಸಾಮಾಗ್ರಿಗಳು, ಜೆರಾಕ್ಸ್ ಸಹಿತ ಎಲ್ಲಾ ಬಗೆಯ ವಸ್ತುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.
- Advertisement -