Wednesday, July 22, 2026
spot_imgspot_img
spot_imgspot_img

ದೇಶದ ಜನಗಣತಿ ಪ್ರಕ್ರಿಯೆ ಆರಂಭ- ವಿಟ್ಲ ಪಟ್ಟಣ ಪಂಚಾಯಿತಿಯಿಂದ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಕರೆ

- Advertisement -
- Advertisement -

ಭಾರತ ದೇಶದ ಜನಗಣತಿಯ ಪ್ರಕ್ರಿಯೆ ಪ್ರಾರಂಭ ಆಗಿದ್ದು, ಮೊದಲ ಹಂತದಲ್ಲಿ ಮನೆ ಗಣತಿ ನಡೆಯಲಿದ್ದು ಇದರ ಅಂಗವಾಗಿ 01/04/2026 ರಿಂದ 15/04/2026 ರ ವರೆಗೆ ಸ್ವಯಂ ಗಣತಿ ನಡೆಯಲಿದೆ.

ಇದರ ಅಂಗವಾಗಿ ವಿಟ್ಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ವಿ. ಸ್ವಯಂ ಗಣತಿ ಮಾಡಿದ್ದು, ವಿಟ್ಲ ಪಟ್ಟಣದ ಎಲ್ಲಾ ನಾಗರಿಕರು ಸ್ವಯಂ ಗಣತಿಯಲ್ಲಿ ಪಾಲ್ಗೊಂಡು ಮನೆಗಣತಿಯ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಸಾರ್ವಜನಿಕರಿಗೆ ಕರೆ ನೀಡಿರುತ್ತಾರೆ.

ದಿನಾಂಕ 16/04/2026 ರಿಂದ 15/05/2026 ರವರೆಗೆ ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಮನೆ ಗಣತಿ ಮಾಡಲಿದ್ದು ಈ ಸಂದರ್ಭದಲ್ಲಿ ಸ್ವಯಂ ಗಣತಿ ಮಾಡಿರುವ ಐ.ಡಿ.ಸಂಖ್ಯೆಯನ್ನು ಗಣತಿದಾರರಿಗೆ ನೀಡಬೇಕು.

ಸ್ವಯಂ ಗಣತಿ ಮಾಡಲು ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿಯನ್ನು ಸಂಪರ್ಕಿಸಲು ಕೋರಿದೆ.

- Advertisement -

Related news

error: Content is protected !!