Wednesday, July 2, 2025
spot_imgspot_img
spot_imgspot_img

ಜ್ಯೋತಿ ರೂಪದಲ್ಲಿ ತನ್ನ ಭಕ್ತರಿಗೆ ದರ್ಶನ ನೀಡಿದ ಶ್ರೀ ಅಯ್ಯಪ್ಪ

- Advertisement -
- Advertisement -

ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಭಕ್ತರು ಕಾತರದಿಂದ ಕಾಯುತ್ತಿದ್ದ ದಿವ್ಯ ಮಕರಜ್ಯೋತಿ ಗುರುವಾರ ಸಂಜೆ 6.45ಕ್ಕೆ ದರ್ಶನವಾಯಿತು.

ಪೊನ್ನಂಬಲ ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಪ್ರಜ್ವಲಿಸುತ್ತಿದ್ದಂತೆ ಭಕ್ತರಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆ ಮುಗಿಲುಮುಟ್ಟಿತ್ತು. ಮಕರ ಸಂಕ್ರಮಣ ಪೂಜಾ ಮಹೋತ್ಸವ ಸಂದರ್ಭ ಶ್ರೀದೇವರಿಗೆ ತೊಡಿಸಲಿರುವ ಚಿನ್ನಾಭರಣ(ತಿರುವಾಭರಣ) ಪಂದಳ ಅರಮನೆಯಿಂದ ಸಂಜೆ 4.30ಕ್ಕೆ ಮೆರವಣಿಗೆ ಮೂಲಕ ಶಬರಿಮಲೆಗೆ ಆಗಮಿಸಿದ್ದು, ದೇವರಿಗೆ ಪವಿತ್ರ ಆಭರಣ ತೊಡಿಸಿ ದೀಪಾರಾಧನೆ ನಡೆದ ತಕ್ಷಣ ದಿವ್ಯ ಮಕರಜ್ಯೋತಿ ದರ್ಶನವಾಗಿದೆ.

ಶಬರಿಮಲೆಗೆ ಆಗಮಿಸಿದ ಪವಿತ್ರ ಆಭರಣವನ್ನು ತಂತ್ರಿ ಕಂಠರರ್​ ರಾಜೀವರ್​ ಹಾಗೂ ಮುಖ್ಯ ಅರ್ಚಕ ವಿ.ಕೆ ಜಯರಾಜ್​ ಪೋತ್ತಿ ಅವರು ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿದರು. ದೀಪಾರಾಧನೆ ನಡೆಯುತ್ತಿದ್ದಂತೆ ಗರ್ಭಗುಡಿಯ ಮೇಲ್ಭಾಗದಲ್ಲಿ ಗರುಡ ಪ್ರದಕ್ಷಿಣೆ ಹಾಕುತ್ತಿದ್ದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.

- Advertisement -

Related news

error: Content is protected !!