Sunday, June 21, 2026
spot_imgspot_img
spot_imgspot_img

ಜಪಾನ್‌ನಲ್ಲಿ ಅಪ್ಪಳಿಸಿದ ಚಂಡಮಾರುತ; ಮೂವರು ಬಲಿ..!

- Advertisement -
- Advertisement -

ಟೋಕಿಯೊ: ನೈರುತ್ಯ ಜಪಾನ್‌ ಕಾಗೋ ಶಿಮಾ ಪ್ರಾಂತ್ಯಕ್ಕೆ ಶಾನ್‌ಶಾನ್‌ ಚಂಡಮಾರುತ ಅಪ್ಪಳಿಸಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಭಾರಿ ಮಳೆ, ಗಾಳಿಯಿಂದಾಗಿ ಅನೇಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೈರುತ್ಯ ಕ್ಯುಶು ದ್ವೀಪ ಪ್ರದೇಶದಲ್ಲಿ ಗಂಟೆಗೆ 198 ಕಿ.ಮೀ . ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ.ಅತ್ಯಂತ ಪ್ರಬಲ ಚಂಡಮಾರುತದ ಎಚ್ಚರ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಲಕ್ಷಾಂತರ ಮಂದಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

2.5 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ ಉಂಟಾಗಿದೆ. ಚಂಡಮಾರುತವು ವಾರಾಂತ್ಯದಲ್ಲಿ ರಾಜಧಾನಿ ಟೋಕಿಯೊ ಸೇರಿದಂತೆ ಮಧ್ಯ ಮತ್ತು ಪೂರ್ವ ಪ್ರದೇಶಗಳಿಗೆ ವ್ಯಾಪಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಜಪಾನ್ ಏರ್‌ಲೈನ್ಸ್‌ , ವಿಮಾನಯಾನ ಸಂಸ್ಥೆಗಳು 600ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. ಕ್ಯುಶು ದ್ವೀಪದ ಹಲವೆಡೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

- Advertisement -

Related news

error: Content is protected !!