


ಬೆಂಗಳೂರು: ಮಾಸಿಕ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಳೆದ 10 ದಿನಗಳ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಗೆ ಸಚಿವ ಯು.ಟಿ.ಖಾದರ್ ಅಸಮಾಧಾನ ಹೊರಹಾಕಿದ್ದಾರೆ.
ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ. 10 ದಿನ ಪ್ರತಿಭಟನೆ ಆಗಿದೆ, ಆರೋಗ್ಯ ಇಲಾಖೆ ಏನು ಸಮಸ್ಯೆಗೆ ಸಿಲುಕಿದೆಯಾ? ಇಲ್ಲ ತಾನೇ? ಹಳ್ಳಿಗಳಲ್ಲಿ ಏನಾದ್ರು ಸಮಸ್ಯೆ ಆಗಿದೆಯಾ? ಇಲ್ಲ ಎಂದು ಖಾದರ್ ಮಾತನಾಡಿದ್ದಾರೆ.
ಆಶಾಗಳ ಸೇವೆ ಇಲ್ಲ ಅಂದ್ರೂ ಆರೋಗ್ಯ ಇಲಾಖೆ ನಡೆಯುತ್ತೆ. ಅದನ್ನ ಆಶಾಗಳೇ ತೋರಿಸಿ ಕೊಟ್ಟಿದ್ದಾರೆ. ಪ್ರತಿಭಟನೆಯಿಂದ ರಾಜ್ಯದಲ್ಲಿ ಏನು ಸಮಸ್ಯೆ ಆಗಿಲ್ಲ. ಹೆರಿಗೆ ಆಗ್ತಿದೆ, ಎಲ್ಲಾ ಆಗ್ತಿದೆ. ಆಶಾಗಳು ಇದ್ದರೂ ನಡೆಯುತ್ತೆ, ಇಲ್ಲದೇ ಇದ್ದರೂ ನಡೆಯುತ್ತೆ ಅಂತಾ ಅವರೇ ತೋರಿಸಿಕೊಟ್ಟಿದ್ದಾರೆ. ಆಶಾಗಳು ಇಲ್ಲ ಅಂದರೆ ಡಾಕ್ಟರ್ ಇಲ್ಲವ? ನರ್ಸ್ ಇಲ್ಲವಾ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.
ತಮಿಳುನಾಡಿನಲ್ಲಿ ಕಾರ್ಯಕರ್ತರು ಇಲ್ಲ. ಆದರೂ ಅಲ್ಲಿ ತಾಯಿ ಮರಣ ಪ್ರಮಾಣ, ಶಿಶು ಮರಣ ಪ್ರಮಾಣ ಕಡಿಮೆ ಇದೆ. ನಮ್ಮಲ್ಲಿ ಕಾರ್ಯಕರ್ತರು ಇದ್ದಾರೆ. ಅಲ್ಲಿ ಆಶಾ ಕಾರ್ಯಕರ್ತೆ ಇಲ್ಲ. ಅಂದರೂ ಎಲ್ಲಾ ಚೆನ್ನಾಗಿದೆ ಅಲ್ವ ಎಂದು ಪ್ರಶ್ನಿಸಿದ್ದಾರೆ.
ನರ್ಸ್ಗಳಿಗೆ 10 ಸಾವಿರ ಸಂಬಳ, ಶಿಕ್ಷಕರಿಗೆ 12 ಸಾವಿರ ಸಂಬಳ, ಆರೋಗ್ಯ ಸಹಾಯಕರಿಗೆ 4,500 ರೂ. ಸಂಬಳ. ಇವರಿಗೆ 15 ಸಾವಿರ ಕೊಡಬೇಕಾ ಎಂದು ಅವರು ಕೇಳಿರುವುದಾಗಿ ಮೂಲಗಳಿಮದ ತಿಳಿದುಬಂದಿದೆ.








