Wednesday, July 22, 2026
spot_imgspot_img
spot_imgspot_img

ಕಡಬ: ವ್ಯಕ್ತಿ ಆತ್ಮಹತ್ಯೆ : ಪ್ರಕರಣ ದಾಖಲು

- Advertisement -
- Advertisement -

ಕಡಬ: ಇಲ್ಲಿನ ನೂಜಿಬಾಳ್ತಿಲ ಪ್ರದೇಶದಲ್ಲಿ ವಾಸವಾಗಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಕಡಬ ಕೊಣಾಜೆ ನಿವಾಸಿ ರವಿಚಂದ್ರ ಬಿ (37) ಅವರ ದೂರಿನಂತೆ, ಅವರ ತಂದೆ ಚೆನ್ನಪ್ಪ ಪೂಜಾರಿಯವರು ಕಡಬ ನೂಜಿಬಾಳ್ತಿಲದಲ್ಲಿ ಬಾಡಿಗೆ ರೂಮಿನಲ್ಲಿ ವಾಸವಿದ್ದು, ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು ಎನ್ನಲಾಗಿದೆ.

ಮೇ 1 ರಂದು,ದೂರುದಾರರ ತಂದೆಯವರು ವಾಸವಿದ್ದ ಕಟ್ಟಡದ ಮಾಲೀಕರು ರವಿಚಂದ್ರ ಬಿ ಅವರಿಗೆ ಕರೆ ಮಾಡಿ, ನಿಮ್ಮ ತಂದೆಯವರು ಬಾಡಿಗೆ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 17/2026, ಕಲಂ 194 BNSS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

- Advertisement -

Related news

error: Content is protected !!