Friday, August 7, 2026
spot_imgspot_img
spot_imgspot_img

ಪುತ್ತೂರು: ಮಹಿಳೆ ನಾಪತ್ತೆ ಪ್ರಕರಣ-ಮಾಜಿ ಪ್ರಿಯಕರನೊಂದಿಗೆ ಪತ್ತೆ!

- Advertisement -
- Advertisement -

ಪುತ್ತೂರು: ಉತ್ತಮ ಬಾಬು ಇದರಗುಚ್ಚಿ ಎಂಬವರ ಪತ್ನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಮಹಿಳೆಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದಾರೆ.

ಉತ್ತಮ ಬಾಬು ಇದರಗುಚ್ಚಿ ಎಂಬವರ ಪತ್ನಿ ಲಲಿತಾ(25)ರವರು ಜ.22ರಂದು ನಾಪತ್ತೆಯಾಗಿದ್ದರು. ಈ ಕುರಿತು ಉತ್ತಮ ಬಾಬು ಅವರು ಜ.26ಕ್ಕೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಪೊಲೀಸರು ನಾಪತ್ತೆಯಾಗಿದ್ದ ಲಲಿತಾ ಅವರನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದಾರೆ.


ನಾಪತ್ತೆಯಾಗಿದ್ದ ಲಲಿತಾ ಅವರಿಗೆ ಉತ್ತಮ ಬಾಬು ಇದರಗುಚ್ಚಿ ಅವರೊಂದಿಗೆ ವಿವಾಹವಾಗಿ 5 ವರ್ಷದ ಆಗಿತ್ತು. ಆದರೆ ವಿವಾಹಕ್ಕೂ ಮುಂಚೆ ಇದ್ದ ಮಾಜಿ ಪ್ರಿಯಕರನೊಂಂದಿಗೆ ಲಲಿತಾ ಹೋಗಿದ್ದರು. ಮಹಿಳಾ ಠಾಣಾ ಪೊಲೀಸರು ದೂರಿನ ಕುರಿತು ತನಿಖೆ ಕೈಗೆತ್ತಿಕೊಂಡಾಗ ಸುಮಾರು ಒಂದೂವರೆ ವರ್ಷದ ಹಿಂದೆಯೂ ಲಲಿತಾ ಅವರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಇದೇ ಆದಾರದಲ್ಲಿ ಪೊಲೀಸರು ತನಿಖೆ ನಡೆಸಿ ಲಲಿತಾ ಅವರನ್ನು ಬೆಂಗಳೂರಿನಲ್ಲಿ ಮಾಜಿ ಪ್ರಿಯಕರನೊಂದಿಗೆ ಇರುವುದನ್ನು ಪತ್ತೆ ಮಾಡಿದ್ದಾರೆ.

- Advertisement -

Related news

error: Content is protected !!