Wednesday, July 22, 2026
spot_imgspot_img
spot_imgspot_img

ವಿಟ್ಲ: ಚಂದಪ್ಪಾಡಿ ಶ್ರೀ ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ

- Advertisement -
- Advertisement -

ವಿಟ್ಲ: ಚಂದಪ್ಪಾಡಿ ಮನೆಯಲ್ಲಿ ಇಂದು ಶ್ರೀ ಕಲ್ಕುಡ-ಕಲ್ಲುರ್ಟಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕ ಹಾಗೂ ನೇಮೋತ್ಸವ ನಡೆಯಲಿರುವುದು.

ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪ್ರತಿಷ್ಠೆ ನಡೆದು ಬಳಿಕ ವೇದಮೂರ್ತಿ ಶ್ರೀ ಉದಯೇಶ ಕೆದಿಲಾಯರವರ ನೇತೃತ್ವದಲ್ಲಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕ ನೆರವೇರಿತು.

ಸಂಜೆ ಕಲ್ಲಗದ್ದೆ ಗುತ್ತುವಿನಿಂದ ಚಂದಪ್ಪಾಡಿ ಚಾವಡಿಗೆ ಭಂಡಾರ ಆಗಮಿಸಿ, ಬಳಿಕ ಅನ್ನಸಂತರ್ಪಣೆ ನಡೆದು, ನಂತರ ದೈವಗಳ ನೇಮೋತ್ಸವ ನಡೆಯಲಿದೆ.

ನೇಮೋತ್ಸವದ ನೇರ ಪ್ರಸಾರವು ಎಲ್ ಇ ಡಿ ಪರದೆಯಲ್ಲಿ ಹಾಗೂ ನಿಮ್ಮ ನೆಚ್ಚಿನ ‘ವಿ ಟಿವಿ’ಯಲ್ಲಿ ಪ್ರಸಾರವಾಗಲಿರುವುದು.

- Advertisement -

Related news

error: Content is protected !!