Thursday, July 30, 2026
spot_imgspot_img
spot_imgspot_img

ವಿದ್ಯುತ್ ದುರಸ್ತಿ ವೇಳೆ ಅವಘಡ ಪವರ್​ ಮ್ಯಾನ್ ಸ್ಥಳದಲ್ಲಿಯೇ ಸಾವು !

- Advertisement -
- Advertisement -

ಚಿಕ್ಕಮಗಳೂರು: ಟ್ರಾನ್ಸ್ ಫರ್ಮರ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್‍ನಿಂದ ಪವರ್ ಮ್ಯಾನ್ ಕಂಬದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.

ಕಲ್ಲೇಶ್ (27) ಮೃತ ಯುವಕ. ಕಲ್ಲೇಶ್ ಮೂಲತಃ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ನಿವಾಸಿಯಾಗಿದ್ದು, ಕಡೂರು ತಾಲೂಕಿನ ಮೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಟಿಸಿಯಿಂದ ಪವರ್ ಸಪ್ಲೈ ಆಗುತ್ತಿಲ್ಲ ಎಂದು ವಿದ್ಯುತ್ ಕಂಬ ಏರಿದ್ದರು. ಕೆಲಸ ಮಾಡುವಾಗ ವಿದ್ಯುತ್ ಶಾಕ್‍ನಿಂದ ಕಂಬದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಕಲ್ಲೇಶ್ ಮದುವೆಗೆ ನಿಶ್ಚಿತಾರ್ಥ ಕೂಡ ಮುಗಿದಿದ್ದು, ಮದುವೆಗೆ ಇನ್ನೆರಡು ತಿಂಗಳು ಬಾಕಿ ಇತ್ತು. ಎದೆಮಟ್ಟದ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ನೋವು ಮುಗಿಲುಮುಟ್ಟಿದೆ. ಯಗಟಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!