Thursday, July 30, 2026
spot_imgspot_img
spot_imgspot_img

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವಿಟ್ಲ ನಗರದ 15ನೇ, ಶಾಖೆ ಉದ್ಘಾಟನೆ

- Advertisement -
- Advertisement -

ನೇರಳಕಟ್ಟೆ ಶ್ರೀ ಗಣೇಶ ಸಭಾಭವನ ಶಾಖೆಯನ್ನು ಉದ್ಘಾಟಿಸಿದ ವೆಂಕಪ್ಪ ರೈ ಕುರ್ಲೆತ್ತಿಮಾರ್

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಕೇಂದ್ರ ಕಛೇರಿ ತುಮಕೂರು ಇದರ ವಿಟ್ಲ ನಗರದ 15ನೇ, ಶಾಖೆಯಾಗಿ ಶ್ರೀ ಗಣೇಶ ಸಭಾಭವನ ಶಾಖೆ ನೇರಳಕಟ್ಟೆ ಇದರ ಉದ್ಘಾಟನೆಯನ್ನು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ರೈ ಕುರ್ಲೆತ್ತಿಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಎಲ್ಲರೂ ನಮ್ಮ ಆರೋಗ್ಯಕ್ಕಾಗಿ ನಿತ್ಯವು ತಪ್ಪದೆ ಅಭ್ಯಾಸ ಮಾಡಿ ಎಂದು ಶುಭಹಾರೈಸಿದರು. ಸಮಿತಿಯ ಪರಿಚಯ ಮತ್ತು ಧ್ಯೇಯೋದ್ದೇಶಗಳನ್ನು ಮನಮುಟ್ಟುವಂತೆ ನಗರ ಸಂಚಾಲಕರಾದ ಪ್ರಕಾಶ ಅಣ್ಣಡ್ಕ ಇವರು ನೇರವೆರಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರಿಂಕ ಶಾಖೆಯ ಶಿಕ್ಷಕರಾದ ದಿವಾಕರ ರವರು ಮಾತನಾಡಿ ನಿತ್ಯ ಅಭ್ಯಾಸ ತನಗಾದ ಅನುಭವಗಳೋಂದಿಗೆ ನಮ್ಮ ಗ್ರಾಮಕ್ಕೆ ಉಚಿತವಾಗಿ ನೀಡುವ ಶಿಕ್ಷಣವನ್ನು ಗ್ರಾಮದ ಎಲ್ಲಾ ಸಾರ್ವಜನಿಕ ಸದುಪಯೋಗ ಪಡೆದುಕೊಳ್ಳಬೇಕು ತಿಳಿಸಿದದರು. ಕಾರ್ಯಕ್ರಮದಲ್ಲಿ ಭಜನೆಯೊಂದಿಗೆ ಪ್ರಾರಂಭವಾಗಿ ಕರಿಂಕ ಶಾಖೆಯ ಯೋಗ ಬಂಧು ಸದಾನಂದ, ಗಣೇಶ, ಕಸ್ತೂರಿ, ದೇವಕಿ, ಪ್ರೇಮ, ಗೀತಾ, ರೂಪಶ್ರೀ, ಅನುಭವವನ್ನು ಹಂಚಿಕೊಂಡರು.

ಹೊಸ ಯೋಗ ಬಂಧುಗಳಿಗೆ ಸೂಚನೆಯನ್ನು ಶಿವಕುಮಾರ್ ಇವರು ನೀಡಿದರು. ಕಾರ್ಯಕ್ರಮವನ್ನು ಶ್ರೀಮತಿ ಹೇಮಲತಾ ನಿರೂಪಿಸಿ, ಶ್ರೀಮತಿ ಅನುರಾಧಾ ಸ್ವಾಗತಿಸಿ, ಶ್ರೀಮತಿ ಶಶಿಪ್ರಭಾ ವಂದನಾರ್ಪಣೆ ಮಾಡಿದರು. 150 ಯೋಗ ಬಂಧುಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

- Advertisement -

Related news

error: Content is protected !!