Monday, October 19, 2026
spot_imgspot_img
spot_imgspot_img

ಸುಳ್ಯ: ವಾಹನಗಳ ಮುಖಾಮುಖಿ ಡಿಕ್ಕಿ – ಅನನಾಸು ಸಾಗಾಟದ ಪಿಕಪ್ ಪಲ್ಟಿ

- Advertisement -
- Advertisement -

ಸುಳ್ಯ: ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಎಳನೀರು ತೆಗೆದುಕೊಂಡು ಹೋಗುತ್ತಿದ್ದ ಅಶೋಕ್ ಲೇಲ್ಯಾಂಡ್ ಮಿನಿ ಮತ್ತು ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಅನನಾಸು ತೆಗೆದುಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಪರಸ್ಪರ ಢಿಕ್ಕಿ ಹೊಡೆದ ರಭಸಕ್ಕೆ ಪಿಕಪ್ ಪಲ್ಟಿಯಾದ ಘಟನೆ ಇಂದು ಮುಂಜಾನೆ ಹಳೆಗೇಟಿನಲ್ಲಿ ನಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಅಶೋಕ್ ಲೈಲ್ಯಾಂಡ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಪಲ್ಟಿಯಾದ ಬೊಲೆರೊ ಪಿಕಪ್ ಕೂಡ ಜಖಂ ಗೊಂಡಿದ್ದು ಅನನಾಸು ಹಾಗೂ ಎಳನೀರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಎರಡು ವಾಹನದ ಚಾಲಕರು ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!