Friday, July 4, 2025
spot_imgspot_img
spot_imgspot_img

ಇರಾ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಗ್ನೇಸ್ ಡಿ ಸೋಜ, ಉಪಾಧ್ಯಕ್ಷರಾಗಿ ಮೊಯ್ದುಕುಂಞಿ ಆಯ್ಕೆ

- Advertisement -
- Advertisement -

ಬಂಟ್ವಾಳ: ಇರಾ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಆಗ್ನೇಸ್ ಡಿ ಸೋಜ ಹಾಗೂ ಮೊಯ್ದುಕುಂಞಿ ಆಯ್ಕೆಗೊಂಡರು. ಕಾಂಗ್ರೆಸ್ ಬೆಂಬಲಿತ ಪಕ್ಷವು ಚುನಾವಣೆಯಲ್ಲಿ 19 ಸ್ಥಾನಗಳಲ್ಲಿ 13 ಸ್ಥಾನ ಪಡೆದು ಸ್ಪಷ್ಟ ಬಹುಮತ ಪಡೆದಿತ್ತು.

ಅಧ್ಯಕ್ಷ ,ಉಪಾಧ್ಯಕ್ಷ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ , ಉಪಾಧ್ಯಕ್ಷರುಗಳಿಗೆ ತಲಾ 13 ಮತಗಳು ಬಿದ್ದು ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಶ್ರೀಮತಿ ಭಾನುರೇಖಾ ಶೆಟ್ಟಿ ಹಾಗೂ ರಮೇಶ್ ಪೂಜಾರಿಯವರು ತಲಾ 6 ಮತಗಳನ್ನು ಪಡೆದಿದ್ದಾರೆ.

ಎರಡೂ ಪಕ್ಷದಲ್ಲಿ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಗಳಾದ ಮಂಚಿ ಪಶು ವೈದ್ಯಾಧಿಕಾರಿ ಕೃಷ್ಣಮೂರ್ತಿ ನಡೆಸಿಕೊಟ್ಟರು.

ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಅಬ್ದುಲ್ ಜಲೀಲ್,ನಾಸಿರ್ ನಡುಪದವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂಧಿಸಿದರು.

- Advertisement -

Related news

error: Content is protected !!