- Advertisement -
- Advertisement -
ವಿಟ್ಲ: ಚಂದಳಿಕೆ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಿ.ಪಿ.ಸಿ.ಆರ್.ಐ ಇಲ್ಲಿ ಸರಕಾರಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿ ಇದೀಗ ನಿವೃತ್ತಿ ಹೊಂದಿದ ಸಿ ಪುರಂದರ ಕೋಟೆಲು ಇವರಿಗೆ ದ. ಕ. ಜಿ. ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀಮತಿ ಭವಾನಿ ರೈ ಕೊಲ್ಯ, ನಿವೃತ್ತ ಶಿಕ್ಷಕರಾದ ನಾರಾಯಣಗೌಡ, ಚಂದಳಿಕೆ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಮೋಹನ್ ಗೌಡ ಕಾಯರ್ ಮಾರು, ದೇಜಪ್ಪ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ವಿಟ್ಲ, ಮಾಧವ ಪೂಜಾರಿ ಪಟ್ಲ, ರಾಜೀವ್ ಪೂಜಾರಿ ಚಂದಳಿಕೆ, ಶ್ರೀಮತಿ ತೆರೇಸಾ ಬೂಡು , ಜಾಯ್ ಪ್ರವೀಣ್ ಬೂಡು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಮತಿ ಸುಮತಿ ದೇಜಪ್ಪ, ಮುಖ್ಯೋಪಾಧ್ಯಾಯರಾದ ವಿಶ್ವನಾಥಗೌಡ ಕುಳಾಲು ,ದೈಹಿಕ ಶಿಕ್ಷಕರಾದ ಸುರೇಶ್ ಶೆಟ್ಟಿ ಕೇಪು, ಶ್ರೀಮತಿ ರೇಷ್ಮಾ ಲೂವಿಸ್, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕ ವೃಂದದವರು ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.
- Advertisement -