Friday, July 4, 2025
spot_imgspot_img
spot_imgspot_img

ಬಳಕೆದಾರರಿಗಾಗಿ ಲಾಗ್​ ಔಟ್​ ಫೀಚರ್​ ಪರಿಚಯಿಸಲಿರುವ ವಾಟ್ಸ್​ಆ್ಯಪ್​ – ಏನೀದರ ವಿಶೇಷತೆ..?

- Advertisement -
- Advertisement -

ನವದೆಹಲಿ: ಜಾಗತಿಕವಾಗಿ ಅತೀ ಹೆಚ್ಚು ಬಳಕೆ ಮಾಡುವ ಇನ್ಸೆಂಟ್ ಮೆಸೇಜಿಂಗ್ ಆ್ಯಪ್ ಎಂದರೆ ಅದು ವಾಟ್ಸ್ಆ್ಯಪ್. ಇತ್ತೀಚೆಗೆ ಕಳೆದುಕೊಳ್ಳುತ್ತಿರುವ ತನ್ನ ಪ್ರಸಿದ್ಧತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಹೌದು, ಇದೀಗ ವಾಟ್ಸ್ಆ್ಯಪ್ ಲಾಗ್ ಔಟ್ ಫೆಸಿಲಿಟಿ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಒತ್ತುನೀಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ. ಸದ್ಯ ವಾಟ್ಸ್ಆ್ಯಪ್ ಬಳಕೆ ಮಾಡುವವರ ಸಂಖ್ಯೆ 200 ಕೋಟಿ ದಾಟಿದೆ.

ದಿನವಿಡೀ, ವಾಟ್ಸ್ಆ್ಯಪ್ ಸಂದೇಶಗಳಿಂದ ಹಲವು ಜನರಿಗೆ ಕಿರಿಕಿರಿ ಕೂಡ ಆಗುತ್ತದೆ. ಆದರೆ, ಫೇಸ್ಬುಕ್-ಟ್ವಿಟರ್ ಇತರ ಸಾಮಾಜಿಕ ತಾಣಗಳಂತೆ, ಇದರಲ್ಲಿ ಲಾಗ್ ಔಟ್ ಆಯ್ಕೆಯ ಕೊರತೆಯ ಕಾರಣ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದನ್ನ ಮನಗಂಡು ವಾಟ್ಸ್ಆ್ಯಪ್ ಲಾಗ್ ಔಟ್ ಆಯ್ಕೆಯನ್ನು ಪರಿಚಯಿಸುವಲ್ಲಿ ಮುಂದಾಗಿದೆ.

WABetaInfo ಹೇಳುವಂತೆ, ಈ ವೈಶಿಷ್ಟ್ಯವನ್ನು ಇನ್ನೂ ಸಾರ್ವಜನಿಕರಿಗೆ ಮುಕ್ತವಾಗಿಸಿಲ್ಲ‌ , ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಪ್ರೊಗ್ರಾಮ್ ಅಡಿಯಲ್ಲಿ ನವೀಕರಿಸಲಾಗಿದೆ. ಈ ಮೂಲಕ ಗೌಪ್ಯತೆಗೆ ಮತ್ತಷ್ಟು ಹೆಚ್ಚು ಒತ್ತು ನೀಡುವ ಪ್ರಯತ್ನ ಸಾಗಿದೆ.. ಈಗಾಗಲೇ ವಾಟ್ಸ್ಆ್ಯಪ್ ವೆಬ್ ನಲ್ಲಿ ಈ ಆಯ್ಕೆ ಇದೆ. ಆದರೆ ಆ್ಯಪ್ ನಲ್ಲಿ ಲಾಗ್ ಔಟ್ ಆಯ್ಕೆ ಇಲ್ಲ. ಇನ್ನೂ ಈ ನೂತನ ಫೀಚರ್ ಬಂದ ನಂತರ ಡಿಲೀಟ್ ಅಕೌಂಟ್ ಫೀಚರ್ ಕಣ್ಮರೆಯಾಗಲಿದೆ. ವಾಟ್ಸ್ಆ್ಯಪ್ ಈ ಲಾಗ್ ಔಟ್ ವೈಶಿಷ್ಟ್ಯ ವರ್ಶನ್ 2.21.30.16ನಲ್ಲಿ ನೀಡಲಾಗಿದೆ.

ಇನ್ನೂ ಡೆಸ್ಕ್ ಟಾಪ್ ನಲ್ಲಿ ವಾಟ್ಸ್ಆ್ಯಪ್ ಬಳಸಬೇಕಾದರೇ ಈ ಮೊದಲು ನಮ್ಮ ಫೋನ್ ತೆಗೆದುಕೊಂಡು ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಲಾಗಿನ್ ಆಗಬೇಕಿತ್ತು. ಇದೊಂದು ದೀರ್ಘಾವಧಿಯ ವಿಧಾನವಾಗಿದ್ದು, ಕೆಲವೊಮ್ಮೆ ನೆಟ್ ವರ್ಕ್ ಸಮಸ್ಯೆಯಿದ್ದರೇ ಲಾಗಿನ್ ಆಗುವುದು ಕೂಡ ವಿಳಂಬವಾಗುತ್ತಿತ್ತು.

- Advertisement -

Related news

error: Content is protected !!