- Advertisement -
- Advertisement -
ವಿಟ್ಲ: ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಫರ್ಟಿಲೈಸರ್ ಅಡ್ವೈಸರ್ ಫಾರಂ(ಎಫ್.ಎ.ಎಫ್) ನ ಸದಸ್ಯರಾಗಿ ಆಯ್ಕೆಯಾಗಿರುವ ಇಡ್ಕಿದು ಗ್ರಾಮದ ಕೆ. ರಾಜರಾಮ ಶೆಟ್ಟಿ ಕೋಲ್ಪೆ ಗುತ್ತು ರವರನ್ನು ಮಾ.೭ರಂದು ಮೈಸೂರಿನ ಎಸ್.ಎಲ್.ವಿ. ಗ್ರೂಪ್ಸ್ ನ ಮಾಲಕರಾದ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ್ ದಾಸ್ ರವರ ಮನೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಿವಾಕರ ದಾಸ್ ರವರ ತಾಯಿ ಸುಂದರಿ ರಾಮದಾಸ್, ಹೇಮಾವತಿ ದಿವಾಕರ ದಾಸ್, ಸುರೇಶ್ ದಾಸ್, ರಾಜೀವಿ ಸುರೇಶ್ ದಾಸ್, ಮೀರಾ ಕೇಶವ ದಾಸ್, ರಾಮ್ ದಾಸ್ ಶೆಟ್ಟಿ ವಿಟ್ಲ, ನಂದಕುಮಾರ್ ಕಂಬಳಬೆಟ್ಟು, ಗುಣಪಾಲ್ ದಾಸ್ ನೇರ್ಲಾಜೆ, ಕಾರ್ತಿಕ್ ದಾಸ್, ದಿನೇಶ್ ಶೆಟ್ಟಿ ಕಂಬಳಬೆಟ್ಟು, ರಾಜಾರಾಮ ಶೆಟ್ಟಿರವರ ಪತ್ನಿ ಮೋನಿಶಾ ಶೆಟ್ಟಿ, ಪುತ್ರ ರಕ್ಷಿತ್ ಶೆಟ್ಟಿ, ಪುತ್ರಿ ಸಂಪ್ರೀತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


- Advertisement -