ಬೆಳ್ತಂಗಡಿ: ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಅನ್ಯ ಕೋಮಿನ ಯುವಕನೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲವ್ ಜಿಹಾದ್ ಪ್ರಯೋಗ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಬೆಳ್ತಂಗಡಿಯ ಮಿತ್ತಬಾಗಿಲು ಎಂಬಲ್ಲಿ ನಡೆದಿದೆ.

ಬಾಲಕಿ ತನ್ನ ಅಜ್ಜಿ ಮನೆಯಾದ ಧರ್ಮಸ್ಥಳದಿಂದ ಸರಕಾರಿ ಬಸ್ಸಿನಲ್ಲಿ ಪ್ರತಿನಿತ್ಯ ಶಾಲೆಗೆ ಹೋಗಿ ಬರುತ್ತಿದ್ದಳು. ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದು ಸಂಜೆ ಶಾಲೆ ಮುಗಿಸಿ ದಿಡುಪೆ ಬಸ್ಸಿನಲ್ಲಿ ಮನೆಗೆ ಬರುತ್ತಿರುವ ಸಮಯ ಆಕೆಗೆ ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಮಹಮ್ಮದ್ ಇರ್ಫಾನ್ ಎಂಬಾತನು ದಿಡುಪೆಯಿಂದ ಅದೇ ಬಸ್ಸಿಗೆ ಹತ್ತಿಕೊಂಡಿದ್ದಾನೆ.

ಬಳಿಕ ಆಕೆಯ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದು, ಮಾತನಾಡುತ್ತಿದ್ದವನು ದಾರಿಯ ಮಧ್ಯೆ ಏಕಾಏಕಿ ಆಕೆಯ ಕೈ ಹಿಡಿದು ಎಳೆದು ಎದೆಗೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಇದನ್ನು ಗಮನಿಸಿದ ಹಿಂದೂ ಸಂಘಟನೆಯ ಹುಡುಗರು ಆತನನ್ನು ಹಿಡಿದು ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

ಅಪ್ರಾಪ್ತಳ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ಮಹಮ್ಮದ್ ಇರ್ಪಾನನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

