Wednesday, June 24, 2026
spot_imgspot_img
spot_imgspot_img

ಚಿನ್ನಾಭರಣವನ್ನು ತೊಳೆದು ಕೊಡುವುದಾಗಿ ಹೇಳಿ ಮಹಿಳೆಗೆ ಮೋಸ..!

- Advertisement -
- Advertisement -

ಶಿವಮೊಗ್ಗ: ಚಿನ್ನಾಭರಣವನ್ನು ತೊಳೆದು ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರದಲ್ಲಿ 23 ಗ್ರಾಂ ಚಿನ್ನವನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಅಶೋಕ ನಗರದ ಏಳನೇ ಕ್ರಾಸ್‌ ನಿವಾಸಿ ಸಂಗೀತಾ ಎಂಬುವವರೇ ಮೋಸ ಹೋದ ಮಹಿಳೆ.

ಮೊದಲು ಕಾಲುಂಗುರವನ್ನು ತೆಗೆದುಕೊಂಡು ಅದನ್ನು ತೊಳೆದು ಹೊಳೆಯುವಂತೆ ಮಾಡಿದ್ದಾರೆ. ಬಳಿಕ ತಾಳಿಯನ್ನು ಇದೇ ರೀತಿ ಮಾಡಿಕೊಡುವುದಾಗಿ ನಂಬಿಸಿ ಆಕೆಯಿಂದ ತಾಳಿಯನ್ನು ಪಡೆದಿದ್ದಾರೆ. ದುಷ್ಕರ್ಮಿಗಳ ಬಳಿಯಲ್ಲಿದ್ದ ದ್ರವಣವೊಂದಕ್ಕೆ ಸರವನ್ನು ಹಾಕಿದ್ದಾರೆ.

ಅದನ್ನು ಬ್ರಷ್‌ನಿಂದ ಉಜ್ಜಿ ಹೊರ ತೆಗೆದು ಅರಿಷಿಣ ಲೇಪಿಸಿ ಪೇಪರ್‌ನಲ್ಲಿ ಸುತ್ತಿ ಕೊಟ್ಟಿದ್ದಾರೆ. ಆದರೆ, 2 ಗಂಟೆಯ ನಂತರವಷ್ಟೇ ಇದನ್ನು ಪೇಪರ್‌ನಿಂದ ಹೊರಗೆ ತೆಗೆಯುವ ಕಂಡಿಷನ್‌ ಹಾಕಿದ್ದಾರೆ. ಮಹಿಳೆ ಅವರ ಮಾತನ್ನು ನಂಬಿ ಎರಡು ಗಂಟೆ ನಂತರ ತೆಗೆದು ನೋಡಿದಾಗ ತಾಳಿ ಸರ ತುಂಡು ತುಂಡಾಗಿತ್ತು.

ಅದರಲ್ಲಿ 23 ಗ್ರಾಂ ಚಿನ್ನ ಮಾಯವಾಗಿತ್ತು. ಕೃತ್ಯ ಎಸಗಿರುವ ಆರೋಪಿಗಳ ಅಂದಾಜು ವಯಸ್ಸು 25 ಮತ್ತು 27 ಇರಬಹುದು ಎಂದು ಸಂಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!