Sunday, August 2, 2026
spot_imgspot_img
spot_imgspot_img

ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಜನರೇಟರ್ ಬೋಗಿಯಲ್ಲಿ ಬೆಂಕಿ!!

- Advertisement -
- Advertisement -

ಗಾಜಿಯಾಬಾದ್: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಜನರೇಟರ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಶತಾಬ್ದಿ ಎಕ್ಸ್ ಪ್ರೆಸ್ ರೈಲು ಗಾಜಿಯಾಬಾದ್ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಈ ಘಟ ನಡೆದಿದೆ. ಕೂಡಲೇ ಆ ಬೋಗಿಯನ್ನು ಪ್ರತ್ಯೇಕಿಸಲಾಗಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ.

ಜನರೇಟರ್ ಮತ್ತು ರೈಲಿನ ಲಗೇಜ್ ಇರುವ ಶತಾಬ್ದಿ ಎಕ್ಸ್ ಪ್ರೆಸ್ ನ ಕೊನೆಯ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬೋಗಿಯನ್ನು ಪ್ರತ್ಯೇಕಿಕರಿಸಿ ನಂತರ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಬೋಗಿಯ ಬಾಗಿಲುಗಳು ಜಾಮ್ ಆದ ಕಾರಣ ಬಾಗಿಲುಗಳನ್ನು ಒಡೆದು ಬೆಂಕಿ ನಂದಿಸಲಾಗಿದೆ ಎಂದ ವರದಿ ತಿಳಿಸಿದೆ.

- Advertisement -

Related news

error: Content is protected !!